ಅಕ್ಕ ಜಾಹ್ನವಿಗೇ ಕಾಂಪಿಟೀಷನ್ ಕೊಡಲು ಹೊರಟ ಶ್ರೀದೇವಿ ಇನ್ನೊಬ್ಬ ಪುತ್ರಿ ಖುಷಿ

ಶನಿವಾರ, 29 ಡಿಸೆಂಬರ್ 2018 (09:39 IST)
ಮುಂಬೈ: ಶ್ರೀದೇವಿ ಬದುಕಿದ್ದಾಗಲೇ ಬಣ್ಣದ ಬದುಕು ಪ್ರವೇಶಿಸಿದ್ದ ಜಾಹ್ನವಿ ಈಗ ಬಾಲಿವುಡ್ ನ ಉದಯೋನ್ಮುಖ ತಾರೆಯಲ್ಲಿ ಒಬ್ಬಳಾಗಿದ್ದಾಳೆ. ಇದೀಗ ಜಾಹ್ನವಿ ತಂಗಿ ಖುಷಿ ಕೂಡಾ ಅಕ್ಕನ ಹಾದಿಯಲ್ಲೇ ಇದ್ದಾಳೆ.


ಜಾಹ್ನವಿಗೆ ಮೊದಲ ಬಾರಿಗೆ ಬಣ್ಣ ಹಚ್ಚಲು ಅವಕಾಶ ಮಾಡಿಕೊಟ್ಟಿದ್ದು ನಿರ್ಮಾಪಕ ಕರಣ್ ಜೋಹರ್. ಈಗ ಅದೇ ಕರಣ್ ಜೋಹರ್ ಖುಷಿಯನ್ನೂ ತೆರೆಗೆ ಪರಿಚಯಿಸಲು ಸಿದ್ಧರಾಗಿದ್ದಾರೆ. ಈ ವಿಚಾರವನ್ನು ಅವರೇ ಬಹಿರಂಗಪಡಿಸಿದ್ದಾರೆ.

ನೇಹಾ ದುಪಿಯಾ ನಡೆಸಿಕೊಡುವ ಶೋ ಒಂದರಲ್ಲಿ ಕರಣ್ ಜೋಹರ್ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. 2019 ರಲ್ಲಿ ತಾನು ಖುಷಿಯನ್ನು ತೆರೆಗೆ ಪರಿಚಯಿಸಲಿರುವುದಾಗಿ ಅವರು ಹೇಳಿಕೊಂಡಿದ್ದಾರೆ.

ಈ ಮೂಲಕ ಈಗಾಗಲೇ ಬಾಲಿವುಡ್ ನಲ್ಲಿ ಹೆಸರು ಮಾಡುತ್ತಿರುವ ಜಾಹ್ನವಿಗೆ ತಂಗಿಯಿಂದಲೇ ಸ್ಪರ್ಧೆ ಎದುರಾಗುವ ಸಾಧ್ಯತೆಯಿದೆ. ಶ್ರೀದೇವಿಯಂತೇ ಪುತ್ರಿಯರೂ ಬ್ಯೂಟಿಫುಲ್ ಮತ್ತು ಬೋಲ್ಡ್. ಹೀಗಾಗಿ ಪ್ರೇಕ್ಷಕರಿಗೆ ಇವರು ಇಷ್ಟವಾಗುವುದರಲ್ಲಿ ಸಂಶಯವಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಎರಡನೇ ವಾರವೂ ಕೆಜಿಎಫ್ ಸಕ್ಸಸ್: ಹಿಂದಿ, ಅಮೆರಿಕಾದಲ್ಲಿ ಗಳಿಕೆ ಮಾಡಿದ್ದೆಷ್ಟು?