Select Your Language

Notifications

webdunia
webdunia
webdunia
webdunia

ಶ್ರೀದೇವಿಯವರ ಜೊತೆ ಇಂಗ್ಲಿಷ್ ವಿಂಗ್ಲಿಷ್ ಚಿತ್ರದಲ್ಲಿ ನಟಿಸಿದ ನಟಿ ಸುಜಾತ ಕುಮಾರ್ ಇನ್ನಿಲ್ಲ

ಶ್ರೀದೇವಿಯವರ  ಜೊತೆ ಇಂಗ್ಲಿಷ್ ವಿಂಗ್ಲಿಷ್ ಚಿತ್ರದಲ್ಲಿ  ನಟಿಸಿದ ನಟಿ ಸುಜಾತ ಕುಮಾರ್ ಇನ್ನಿಲ್ಲ
ಮುಂಬೈ , ಮಂಗಳವಾರ, 21 ಆಗಸ್ಟ್ 2018 (15:00 IST)
ಮುಂಬೈ : ದಿವಂಗತ ನಟಿ  ಶ್ರೀದೇವಿ ಅವರು ನಟಿಸಿದ ಇಂಗ್ಲಿಷ್ ವಿಂಗ್ಲಿಷ್ ಚಿತ್ರದಲ್ಲಿ ಶ್ರೀದೇವಿ ಅವರಿಗೆ ಸೋದರಿಯಾಗಿ ನಟಿಸಿದ್ದ ನಟಿ ಸುಜಾತ ಕುಮಾರ್ ಅವರು ಭಾನುವಾರ ನಿಧನರಾಗಿದ್ದಾರೆ.


ಸುಜಾತ ಅವರು ದೀರ್ಘಕಾಲದಿಂದ ನಾಲ್ಕನೇ ಹಂತದ ಮೆಟಾಸ್ಟಾಟಿಕ್ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಅವರನ್ನು ಮುಂಬಯಿಯ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಭಾನುವಾರ ಅವರ ಸ್ಥಿತಿ ತುಂಬಾ ಗಂಭೀರವಾಗಿದ್ದು, ರಾತ್ರಿ ವೇಳೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.


ಸುಜಾತ ಕುಮಾರ್ ಅವರು ನಮ್ಮನ್ನೆಲ್ಲಾ ಅಗಲಿದ್ದಾರೆ ಮತ್ತು ಕಲ್ಪನೆಗೂ ಸಿಲುಕದ ಲೋಕಕ್ಕೆ ಹೋಗಿದ್ದಾರೆ. ಆ.19, ರಾತ್ರಿ 11.26ಕ್ಕೆ ಅವರು ನಮ್ಮನ್ನು ಬಿಟ್ಟು ತೆರಳಿದ್ದಾರೆ ಎಂದು ಸುಜಾತ ಕುಮಾರ್ ಅವರು ಕಿರಿಯ ಸೋದರಿ ಸುಚಿತ್ರಾ ಕೃಷ್ಣಮೂರ್ತಿ ಫೇಸ್ ಬುಕ್ ನಲ್ಲಿ ದುಃಖದಿಂದ ಬರೆದಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ವೈವಾಹಿಕ ಜೀವನಕ್ಕೆ ಕಾಲಿಟ್ಟ ಸ್ಯಾಂಡಲ್ ವುಡ್ ನ ಖ್ಯಾತ ನಿರ್ದೇಶಕ ಪವನ್ ಒಡೆಯರ್