Select Your Language

Notifications

webdunia
webdunia
webdunia
Tuesday, 8 April 2025
webdunia

ಜಯಲಲಿತಾ ಬಯೋಪಿಕ್ ಸಿನಿಮಾದಲ್ಲಿ ಜಯಲಲಿತಾ ಪಾತ್ರ ನಿಭಾಯಿಸಲಿರುವ ನಟಿ ಯಾರು ಗೊತ್ತೆ?

ಮುಂಬೈ
ಮುಂಬೈ , ಸೋಮವಾರ, 20 ಆಗಸ್ಟ್ 2018 (14:13 IST)
ಮುಂಬೈ : ತಮಿಳುನಾಡಿನ ಪ್ರಭಾವಿ ರಾಜಕಾರಣಿ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಬಯೋಪಿಕ್ ಸಿನಿಮಾ ಮಾಡಲು ಬೃಂದಾ ಪ್ರಸಾದ್ ಅವರ ವಿಬ್ರಿ ಮೀಡಿಯಾ ನಿರ್ಧರಿಸಿದೆ. ಆದರೆ ಜಯಲಲಿತಾ ಪಾತ್ರವನ್ನು ಯಾರು ಮಾಡ್ತಾರೆ ಎಂಬ ಕುತೂಹಲ ಇದೀಗ ಹಲವರಲ್ಲಿ ಮೂಡಿದೆ.


ಹೌದು. ಸಿನಿಮಾ ಮತ್ತು ರಾಜಕೀಯ ಎರಡು ಕ್ಷೇತ್ರದಲ್ಲಿ ಮಹಾನ್ ಸಾಧನೆ ಮಾಡಿದ ದೇಶ ಕಂಡ ಪ್ರಭಾವಿ ರಾಜಕಾರಣಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಬಯೋಪಿಕ್​ 2019ರಲ್ಲಿ ರಿಲೀಸ್​ ಆಗಲಿದೆ. ಜಯಲಲಿತ ಅವರ ಹುಟ್ಟು ಹಬ್ಬದ ದಿನ ಚಿತ್ರಕ್ಕೆ ಚಾಲನೆ ಸಿಗಲಿದೆ. ಈ ಚಿತ್ರವನ್ನು ಪ್ರಶಸ್ತಿ ವಿಜೇತ ತೆಲುಗು ನಿರ್ದೇಶಕ ವಿಜಯ್ ಅವರು ನಿರ್ದೇಶಿಸಲಿದ್ದಾರೆ. ಈ ಚಿತ್ರ ಬಯೋಪಿಕ ಹಿಂದಿ, ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ತೆರೆ ಕಾಣಲಿದೆ.


ಆದರೆ ಇದೀಗ ಉಂಟಾದ ಗೊಂದಲವೆನೆಂದರೆ ಜಯಲಲಿತಾ ಅವರ ಬಯೋಪಿಕ್ ಸಿನಿಮಾದಲ್ಲಿ ಜಯಲಲಿತಾ ಪಾತ್ರವನ್ನು ಯಾರು ನಿಭಾಯಿಸಲಿದ್ದಾರೆ ಎನ್ನುವುದು. ಸದ್ಯಕ್ಕೆ ನಟಿ ನಯನಾತಾರಾ, ಬಹುಭಾಷಾ ನಟಿ ತ್ರಿಷಾ ಹಾಗೂ ವಿದ್ಯಾಬಾಲನ್ ಅವರ ಹೆಸರು ಕೇಳಿ ಬರುತ್ತಿದ್ದು, ಮೂವರು ನಟಿಯರಲ್ಲಿ ಜಯಲಲಿತಾ ಪಾತ್ರವನ್ನು ಯಾರು ಮಾಡ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಮನಮಾಡಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಟ ಫ​ರ್ಹಾನ್​​ ಅಖ್ತರ್ ಪಶ್ಚಿಮ ಬಂಗಾಳ ಸರ್ಕಾರದ ವಿರುದ್ಧ ಕಿಡಿಕಾರಿದ್ಯಾಕೆ?