Publish Date: Mon, 20 Aug 2018 (07:26 IST)
Updated Date: Mon, 20 Aug 2018 (07:28 IST)
ಮುಂಬೈ : ಕೇರಳದ ಪ್ರವಾಹ ಪೀಡಿತರಿಗೆ ನೆರವು ನೀಡಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿ ಸುಮ್ಮನೆ ಕುಳಿತ ಬಾಲಿವುಡ್ ಸಿನಿಮಾ ತಾರೆಯರ ಮೇಲೆ ಇದೀಗ ನೆಟ್ಟಿಗರು ಕೋಪಗೊಂಡಿದ್ದಾರೆ.
ಬಾಲಿವುಡ್ ನಟರಾದ ವಿವೇಕ್ ಒಬೆರಾಯ್, ಅನುಷ್ಕಾ ಶರ್ಮಾ, ಅಭಿಷೇಕ್ ಬಚ್ಚನ್ ಹಾಗೂ ಅಮಿತಾಬ್ ಬಚ್ಚನ್ ಅವರು ಕೇರಳದ ಸಂತ್ರಸ್ತರಿಗೆ ನಿಮ್ಮ ಕೈಲಾದ ಸಹಾಯ ಮಾಡಿ ಎಂದು ಟ್ವೀಟ್ ಮಾಡಿ ಅಭಿಮಾನಿಗಳಲ್ಲಿ ವಿನಂತಿ ಮಾಡಿಕೊಂಡಿದ್ದಾರೆ.
ಆದರೆ ಅವರು ತಾವು ಮಾತ್ರ ಯಾವುದೇ ರೀತಿಯಾದ ಆರ್ಥಿಕ ನೆರವು ನೀಡದೆ ಇರುವುದಕ್ಕೆ ಇದೀಗ ಅಭಿಮಾನಿಗಳು ಇವರಿಗಿಂತಲೂ ಅವರ ಅಭಿಮಾನಿಗಳೇ ಉತ್ತಮ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಅಮಿತಾಬ್ ಬಚ್ಚನ್ ಅವರ ಟ್ವೀಟ್ ಗೆ ನೆಟ್ಟಿಗರು, “ನಾನು ಬಡವನಾದ ಕಾರಣ ಸಹಾಯ ಮಾಡಲು ಆಗುತ್ತಿಲ್ಲ. ಕಪ್ಪು ಹಣ ಸಂಪಾದಿಸಿದ ಹಿರಿಯರು ಸಹಾಯ ಹಸ್ತ ಚಾಚಬಹುದು” ಎಂದು ವ್ಯಂಗ್ಯವಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ