Select Your Language

Notifications

webdunia
webdunia
webdunia
webdunia

ನಿಕ್ ಜೊತೆ ರೋಕಾ ಮಾಡಿಕೊಂಡ ನಟಿ ಪ್ರಿಯಾಂಕ ಚೋಪ್ರಾ

ನಿಕ್ ಜೊತೆ ರೋಕಾ ಮಾಡಿಕೊಂಡ ನಟಿ ಪ್ರಿಯಾಂಕ ಚೋಪ್ರಾ
ಮುಂಬೈ , ಭಾನುವಾರ, 19 ಆಗಸ್ಟ್ 2018 (11:55 IST)
ಮುಂಬೈ : ಅಮೆರಿಕದ ಗಾಯಕ ನಿಕ್ ಜೋನಾಸ್ ಜೊತೆಗಿರುವ ತಮ್ಮ ಸಂಬಂಧದ ಬಗ್ಗೆ ಹರಡಿದ ರೂಮರ್ಸ್ ಗೆ ಇದೀಗ ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಅವರು ತೆರೆ ಎಳೆದಿದ್ದಾರೆ.


ಹೌದು. ಇತ್ತೀಚೆಗೆ ನಟಿ ಪ್ರಿಯಾಂಕ ಚೋಪ್ರಾ ಅವರು ನಿಕ್ ಜೋನಾಸ್ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಎಲ್ಲಾ ಕಡೆ ಕೇಳಿಬಂದಿತ್ತು. ಆದರೆ ಇದೀಗ ಪ್ರಿಯಾಂಕ ನಿಕ್ ಜೊತೆ ಮದುವೆ ಪೂರ್ವದ ರೋಕಾ ಆಚರಣೆ ಮಾಡುವ ಮೂಲಕ ಶನಿವಾರ ತಮ್ಮಿಬ್ಬರ ಸಂಬಂಧವನ್ನು ಅಧಿಕೃತ ಪಡಿಸಿಕೊಂಡಿದ್ದಾರೆ.


ಶನಿವಾರ ಈ ಜೋಡಿಯು ಇಬ್ಬರ ಕುಟುಂಬದ ಹಿರಿಯರ ಸಮ್ಮುಖದಲ್ಲಿ ರೋಕಾ ಸಂಪ್ರದಾಯದಂತೆ ನಿಶ್ಚಿತಾರ್ಥ ಮಾಡಿಕೊಂಡರು. ರೋಕಾದಲ್ಲಿ ಇವರಿಬ್ಬರು ಜತೆಗಿರುವ ಹಾಗೂ ರೋಮ್ಯಾಂಟಿಕ್ ಆಗಿ ತೆಗೆಸಿಕೊಂಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಫೋಟೋದಲ್ಲಿ ಪ್ರಿಯಾಂಕ ಹಾಗೂ ನಿಕ್ ಜೋನಾಸ್ ಭಾರತದ ಸಂಪ್ರದಾಯಉಡುಗೆಯಲ್ಲಿ ಮಿಂಚಿದ್ದಾರೆ. 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಿರ್ದೇಶಕ ಕರಣ್ ಜೋಹರ್ ಒಬ್ಬ ಸ್ವಜನಪಕ್ಷಪಾತಿ ಎಂದು ಟ್ರೋಲಿಗರು ಹೇಳಿದ್ಯಾಕೆ?