Select Your Language

Notifications

webdunia
webdunia
webdunia
webdunia

ಶಾಲಾ ದಿನಗಳಲ್ಲಿ ಸಲ್ಮಾನ್ ಖಾನ್ ಫ್ಲರ್ಟ್ ಮಾಡುತ್ತಿದ್ದು ಯಾರ ಜತೆ ಗೊತ್ತೆ? ಕೇಳಿದ್ರೆ ಶಾಕ್ ಆಗ್ತೀರಿ!

ಶಾಲಾ ದಿನಗಳಲ್ಲಿ ಸಲ್ಮಾನ್ ಖಾನ್ ಫ್ಲರ್ಟ್ ಮಾಡುತ್ತಿದ್ದು ಯಾರ ಜತೆ ಗೊತ್ತೆ? ಕೇಳಿದ್ರೆ ಶಾಕ್ ಆಗ್ತೀರಿ!
ಮುಂಬೈ , ಶನಿವಾರ, 18 ಆಗಸ್ಟ್ 2018 (06:39 IST)
ಮುಂಬೈ : ಯಾವುದೇ ಸೆಲೆಬ್ರಿಟಿಗಳು ಬೇರೆಯವರ ಜೊತೆ ಹಂಚಿಕೊಳ್ಳಲು ಇಷ್ಟಪಡದಂತಹ ವೈಯಕ್ತಿಕ ವಿಚಾರವೊಂದನ್ನು ಇದೀಗ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಬಹಿರಂಗವಾಗಿ ಹೇಳಿಕೊಂಡಿದ್ದಾರೆ.


ಹೌದು. ನಟ ಸಲ್ಮಾನ್ ಖಾನ್ ಅವರು ಒಬ್ಬ ಸ್ಟಾರ್ ನಟರಾಗಿದ್ದರೂ ಕೂಡ  ತಮ್ಮ ಶಾಲಾ ದಿನಗಳಲ್ಲಿ ಶಿಕ್ಷಕಿಯೊಂದಿಗೆ ಫ್ಲರ್ಟ್ ಮಾಡುತ್ತಿದ್ದೆ ಎಂದು ಹೇಳಿಕೊಂಡಿದ್ದಾರೆ. ವಾರಾಂತ್ಯದಲ್ಲಿ ಬರುವ 'ದಸ್ ಕಾ ದಮ್ - ದುಮ್ಡಾರ್' ನ ಚಿತ್ರಿಕರಣದ ವೇಳೆ ಸಲ್ಮಾನ್ ಖಾನ್ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ.


ನೀವು ಶಾಲಾ ಶಿಕ್ಷಕಿಯ ಜೊತೆ ಪ್ರೀತಿಯ ಬಲೆಯಲ್ಲಿ ಸಿಲುಕಿಕೊಂಡಿದ್ದಿರಾ ಎಂದು ಇಂಡಿಯನ್ಸ್ ಕಾರ್ಯಕ್ರಮದಲ್ಲಿ ಕೇಳಿದಾಗ ಸಲ್ಮಾನ್ ಖಾನ್, ತನ್ನ ಶಾಲೆಯಲ್ಲಿ ಒಬ್ಬರು ಶಿಕ್ಷಕಿ ಮೇಲೆ ಪ್ರೀತಿ ಹುಟ್ಟಿತ್ತು. ಅಷ್ಟೇ ಅಲ್ಲದೆ ಅವರನ್ನು ನಾನು ತನ್ನ ಸೈಕಲ್‍ನಲ್ಲಿ ಮನೆಯವರೆಗೂ ಡ್ರಾಪ್ ಮಾಡುತ್ತಿದ್ದೆ. ಈ ಮೂಲಕ ಅವರು ನನ್ನ ಮುಂದೆ ಕುಳಿತುಕೊಳ್ಳುವಂತೆ ಮಾಡುತ್ತಿದ್ದೆ ಎಂದು ಹೇಳಿಕೊಂಡಿದ್ದಾರೆ.

ಯಾರೊಬ್ಬರು ಶಾಲೆಯಲ್ಲಿ ಶಿಕ್ಷಕಿಯ ಜೊತೆ ಪ್ರೀತಿಯಲ್ಲಿ ಬೀಳದೆ ಇರಲು ಸಾಧ್ಯವಿಲ್ಲ. ಅದನ್ನು ಹೆಚ್ಚು ಜನರು ಒಪ್ಪಿಕೊಳ್ಳುವುದಿಲ್ಲ. ಆದರೆ ನಾನು ನನ್ನ ಶಿಕ್ಷಕಿ ಜೊತೆ ತುಂಬಾ ಫ್ಲರ್ಟ್ ಮಾಡುತ್ತಿದ್ದೆ ಎಂದು ಒಪ್ಪಿಕೊಳ್ಳುತ್ತೇನೆ ಎಂದಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ತೆಲುಗು ಸ್ಟಾರ್ ನಟನ ಜೊತೆ ನಟಿಸುವ ಅವಕಾಶ ಪಡೆದ ನಟಿ ರಾಧಿಕಾ ಕುಮಾರಸ್ವಾಮಿ