Select Your Language

Notifications

webdunia
webdunia
webdunia
webdunia

ತನ್ನ ತಾಯಿಯ ಜೊತೆ ಕಳೆದ ಸುಂದರ ಕ್ಷಣಗಳನ್ನು ಮೆಲುಕು ಹಾಕಿದ ಬಿಗ್ ಬಿ ಅಮಿತಾಬ್ ಬಚ್ಚನ್

ತನ್ನ ತಾಯಿಯ ಜೊತೆ ಕಳೆದ ಸುಂದರ ಕ್ಷಣಗಳನ್ನು ಮೆಲುಕು ಹಾಕಿದ ಬಿಗ್ ಬಿ ಅಮಿತಾಬ್ ಬಚ್ಚನ್
ಬೆಂಗಳೂರು , ಶುಕ್ರವಾರ, 17 ಆಗಸ್ಟ್ 2018 (06:54 IST)
ಮುಂಬೈ : ಬಾಲಿವುಡ್ ನಟ ಬಿಗ್ ಬಿ ಅಮಿತಾಬ್ ಬಚ್ಚನ್ ಅವರು ತನ್ನ ಹಾಗೂ ತಾಯಿಯ ನಡುವಿನ ಬಾಂಧವ್ಯದ ಕ್ಷಣಗಳನ್ನು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.


ಅಮಿತಾಬ್ ಬಚ್ಚನ್ ಅವರು ತಮ್ಮ ಕುಟುಂಬವದರೊಂದಿಗಿರುವ ಫೋಟೊವನ್ನು ಶೇರ್ ಮಾಡಿ, ತಮ್ಮ ತಾಯಿಯ ಜೊತೆ ಕಳೆದ ಸುಮಧುರ ದಿನಗಳನ್ನು ಮೆಲುಕು ಹಾಕಿದ್ದಾರೆ. ನನ್ನ ಸಿನಿಮಾ ಜಗತ್ತಿಗೆ ಪರಿಚಯಿಸಿದ್ದೇ ನನ್ನ ತಾಯಿ ಎಂದಿರುವ ಅಮಿತಾಬ್, ಆಕೆಯ ಜೀವನ ಕ್ರಮ ಎಷ್ಟು ಸುಂದರವಾಗಿತ್ತು ಎಂಬುದನ್ನು ಕೂಡ ವಿವರಿಸಿದ್ದಾರೆ.


ನನ್ನ ತಾಯಿ ಜೀವನದಲ್ಲಿ ಹಲವು ವಿಚಾರಗಳಲ್ಲಿ ನಮಗಾಗಿ ತ್ಯಾಗ ಮಾಡಿದ್ದಾಳೆ. ತಂದೆಯ ಸ್ಥಾನ ತುಂಬಲು ಅವರು ಮಾಡಿದ ಹೋರಾಟ ಅಷ್ಟಿಷ್ಟಲ್ಲ. ಆಕೆ ನನ್ನ ಥಿಯೇಟರ್, ಫಿಲಂ ಹಾಗೂ ಸಂಗೀತಕ್ಕೆ ಪರಿಚಯಿಸಿದ ಮಹಾ ತಾಯಿ. ನಾನು ಬಹುಮಾನ ಗಳಿಸಿದರೆ ಆಕೆ ಸಿಕ್ಕಾಪಟ್ಟೆ ಖುಷಿಯಾಗುತ್ತಿದ್ದರು. ನಾವು ಆಟೋಟ ಸ್ಪರ್ಧೆಯಲ್ಲಿ ಬಹುಮಾನ ಪಡೆಯುತ್ತಿದ್ದಾಗ ಅದರ ಫೋಟೋ ಕ್ಲಿಕ್ಕಿಸಿ, ಅದನ್ನು ತನ್ನ ಬೆಡ್ ರೂಮ್ ನಲ್ಲಿ ನೇತುಹಾಕಿ ಖುಷಿ ಪಡುತ್ತಿದ್ದರು, ಅಮ್ಮನ ಮಲಗುವ ಕೊಠಡಿ ತುಂಬಾ, ನಾವು ಗೆದ್ದ ಕಪ್ ಗಳೇ ತುಂಬಿದ್ದವು ಎಂದಿದ್ದಾರೆ.


ಹಾಗೇ ನನ್ನ ತಾಯಿಯ ಪ್ರತಿನೆನಪುಗಳು ನನ್ನ ಮನದ ತುಂಬೆಲ್ಲಾ ತುಂಬಿದೆ ಆದರೆ ಯಾವುದೇ ವಸ್ತುಗಳಲ್ಲಾ, ಆಕೆಯ ನೆನಪೇ ನನಗೆ ಎಲ್ಲಾ ಎಂದು ಭಾವನಾತ್ಮಕ ಸಂದೇಶವನ್ನು ಬರೆದು ಪೋಸ್ಟ್ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಒಂದೇ ವೇದಿಕೆಯ ಮೇಲೆ ಪ್ರಶಸ್ತಿ ಸ್ವೀಕರಿಸಲಿರುವ ಸ್ಯಾಂಡಲ್ ವುಡ್ ನ ಸ್ಟಾರ್ ನಟರು