Publish Date: Sat, 18 Aug 2018 (06:31 IST)
Updated Date: Sat, 18 Aug 2018 (06:34 IST)
ಮುಂಬೈ : ಸಿನಿಮಾ ನಟಿಯರು ಮದುವೆ ಆದ ಮೇಲೆ ಅವರಿಗೆ ಡಿಮ್ಯಾಂಡ್ ಕಡಿಮೆಯಾಗುತ್ತದೆ. ಆದರೆ ಬಾಲಿವುಡ್ ನಟಿ ಕರೀನಾ ಕಪೂರ್ ಅವರಿಗೆ ಮಾತ್ರ ಮದುವೆ ಆಗಿ ಒಂದು ಮಗುವಿನ ತಾಯಿಯಾದರೂ ಕೂಡ ಅವರಿಗೆ ಬೇಡಿಕೆ ಸ್ವಲ್ಪವೂ ಕಡಿಮೆಯಾಗಿಲ್ಲವಂತೆ.
ಹೌದು. ಬಾಲಿವುಡ್ ನಲ್ಲಿ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿ ಬಹುಬೇಡಿಕೆಯ ನಟಿ ಎನಿಸಿಕೊಂಡಿದ್ದ ನಟಿ ಕರೀನಾ ಕಪೂರ್ ಅವರು ಮದುವೆಯಾದ ಮೇಲೂ ಕೂಡ 'ಭಜರಂಗಿ ಭಾಯಿಜಾನ್', 'ಕಿ ಅಂಡ್ ಕಾ', 'ಉಡ್ತಾ ಪಂಜಾಬ್' ನಂತಹ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದರು.
ನಂತರ ಒಂದು ಮಗುವಿನ ತಾಯಿಯಾದ ಕರೀನಾ ಮತ್ತೆ ಬಾಲಿವುಡ್ ಗೆ ರೀ ಎಂಟ್ರಿ ಕೊಟ್ಟಿದ್ದು 'ವೀರೇ ದಿ ವೆಡ್ಡಿಂಗ್' ಚಿತ್ರದ ಮೂಲಕ. ಈ ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್ ಸಿಕ್ಕಿದ್ದು, ಬಾಕ್ಸ್ ಆಫೀಸ್ ನಲ್ಲಿ ಹೆಚ್ಚು ಕಲೆಕ್ಷನ್ ಕೂಡ ಮಾಡಿತ್ತು. ಇದರಿಂದ ಕರೀನಾ ಡಿಮ್ಯಾಂಡ್ ಕೂಡ ಜಾಸ್ತಿಯಾಗಿದ್ದು, ಚಿತ್ರವೊಂದಕ್ಕೆ 5 ರಿಂದ 7 ಕೋಟಿ ಪಡೆಯುತ್ತಿದ್ದ ಕರೀನಾ ಸಂಭಾವನೆ ಈಗ ಬರೋಬ್ಬರಿ 10 ಕೋಟಿಯಾಗಿದೆಯಂತೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ