Select Your Language

Notifications

webdunia
webdunia
webdunia
webdunia

ತಮ್ಮ ನೀಳ ಕೇಶರಾಶಿಯ ರಹಸ್ಯವನ್ನು ಬಿಚ್ಚಿಟ್ಟ ಬಾಲಿವುಡ್ ಬೆಡಗಿ ದಿಯಾ ಮಿರ್ಜಾ

ತಮ್ಮ ನೀಳ ಕೇಶರಾಶಿಯ ರಹಸ್ಯವನ್ನು ಬಿಚ್ಚಿಟ್ಟ ಬಾಲಿವುಡ್ ಬೆಡಗಿ ದಿಯಾ ಮಿರ್ಜಾ
ಮುಂಬೈ , ಶನಿವಾರ, 18 ಆಗಸ್ಟ್ 2018 (15:49 IST)
ಮುಂಬೈ : ಸುಂದರವಾದ, ನೀಳವಾದ ಕೇಶರಾಶಿಯನ್ನು ಹೊಂದಿರುವ  ಬಾಲಿವುಡ್ ನಟಿ ದಿಯಾ ಮಿರ್ಜಾ ಅವರು ಇದೀಗ ತಮ್ಮ ಕೂದಲಿನ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ.


ನಟಿ ದಿಯಾ ಮಿರ್ಜಾ ಅವರು ಪ್ರತಿದಿನ ಕೂದಲ ಆರೋಗ್ಯ ಕಾಪಾಡುವುದು ಅತ್ಯಗತ್ಯ ಎಂದು ಹೇಳಿದ್ದಾರೆ. ಹಾಗೇ ಪ್ರತಿದಿನ ಅದರ ಆರೈಕೆ ಹೇಗೆ ಮಾಡಿಕೊಳ್ಳಬೇಕು ಎಂಬುದನ್ನು ಕೂಡ ತಿಳಿಸಿದ್ದಾರೆ. ವಾರಕ್ಕೊಮ್ಮೆ ತಲೆಗೆ ಚೆನ್ನಾಗಿ ಎಣ್ಣೆ ಹಚ್ಚಿಕೊಂಡು ಮಸಾಜ್ ಮಾಡಿಕೊಳ್ಳಿ.

ಬ್ಯೂಟಿ ಪಾರ್ಲರ್ ನಲ್ಲಿ ಮಸಾಜ್ ಮಾಡಿಸಿಕೊಳ್ಳುವುದರಿಂದ ನೀವು ಆರಾಮಾವಾಗಿ ರಿಲ್ಯಾಕ್ಸ್ ಮಾಡಿಕೊಳ್ಳಬಹುದು. ಹಾಗೆ ಕೂದಲ ಬುಡದಿಂದ , ಇಡೀ ಕೂದಲು ಒದ್ದೆಯಾಗುವಷ್ಟು ಎಣ್ಣೆ ಹಾಕಿ. ಎರಡು ಮೂರು ಗಂಟೆಗಳ ಬಳಿಕ ಉತ್ತಮ ಶಾಂಪೂವಿನಿಂದ ಉಗುರು ಬೆಚ್ಚಗಿನ ನೀರು ಬಳಸಿ ಸ್ನಾನ ಮಾಡಿ ಎಂದಿರುವ ದಿಯಾ, ಕಂಡೀಷನರ್ ಬಳಸುವುದು ಮರೆಯಬೇಡಿ ಎಂದಿದ್ದಾರೆ.


ಹಾಗೇ ಕೂದಲ ಸೌಂದರ್ಯಕಾಪಾಡುವಂತ ಆಹಾರದ ಕಡೆಗೆ ಗಮನ ಕೊಡುವಂತೆ ಸಲಹೆ ನೀಡಿದ್ದಾರೆ. ವಿಟಮಿನ್, ಪ್ರೋಟಿನ್ ಜಾಸ್ತಿ ಇರುವ ಆಹಾರದ ಕಡೆಗೆ ಗಮನ ಕೊಡಿ, ದೇಹವನ್ನು ಹೈಡ್ರೇಟ್ ಆಗಿ ಇಡುವಂತಹ ಆಹಾರಗಳ ಕಡೆಗೆ ಹೆಚ್ಚಿನ ಗಮನವಿರಲಿ ಇದು ನಿಮ್ಮ ತ್ವಚೆ ಮಾತ್ರವಲ್ಲ ಕೂದಲ ಸೌಂದರ್ಯದಲ್ಲೂ ಪ್ರಮುಖ ಪಾತ್ರವಹಿಸುತ್ತದೆ ಎಂದಿದ್ದಾರೆ.


ಅಮೋನಿಯಾ ಪ್ರೀ ಯಾಗಿರುವ ಹೇರ್ ಪ್ರೋಡಕ್ಟ್ ಗಳಿಗೆ ಹೆಚ್ಚಿನ ಮಹತ್ವ ನೀಡಿ ಎಂದಿರುವ ಅವರು ಕಡಿಮೆ ಬೆಲೆಯಲ್ಲಿ ಲಭ್ಯವಾಗುತ್ತದೆ ಎಂಬ ಕಾರಣಕ್ಕೆ ಕೆಲವೊಂದು ವಸ್ತುಗಳನ್ನು ಖರೀದಿ ಮಾಡಿ, ಬಳಿಕ ಹೆಚ್ಚಿನ ಬೆಲೆ ತೇರುವಂತೆ ಮಾಡಬೇಡಿ ಎಂದು ಕಿವಿಮಾತು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಅಪಘಾತಕ್ಕೀಡಾದ ನಟ ಜೈ ಜಗದೀಶ್ ಕಾರು ; ನಟ ಪ್ರಾಣಾಪಾಯದಿಂದ ಪಾರು