ಕಳ್ಳ ಹಣ ಬಳಸಿ ‘ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಸಿನಿಮಾ ಮಾಡಲಾಗಿದೆಯಂತೆ!

ಭಾನುವಾರ, 30 ಡಿಸೆಂಬರ್ 2018 (06:23 IST)
ನವದೆಹಲಿ: ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಕುರಿತಾದ ಅನುಪಮ್ ಖೇರ್ ಮುಖ್ಯಪಾತ್ರದಲ್ಲಿ ಅಭಿನಯಿಸಿರುವ ‘ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಸಿನಿಮಾಕ್ಕೆ ಬಿಜೆಪಿ ಕಳ್ಳ ಹಣ ಬಳಸಿಕೊಂಡಿದೆ ಎಂದು ಎನ್ ಸಿಪಿ ಆರೋಪಿಸಿದೆ.


ಸಿನಿಮಾದಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತಿತರ ಘಟಾನುಘಟಿ ಕಾಂಗ್ರೆಸ್ ನಾಯಕರ ಬಗ್ಗೆ ಅವಹೇಳನ ಮಾಡಿರಬಹುದು ಎಂದು ಕಾಂಗ್ರೆಸ್ ಈಗಾಗಲೇ ಸಿನಿಮಾ ಬಿಡುಗಡೆಗೆ ವಿರೋಧ ವ್ಯಕ್ತಪಡಿಸಿತ್ತು.

ಇದರ ಬೆನ್ನಲ್ಲೇ ಕಾಂಗ್ರೆಸ್ ಮಿತ್ರ ಪಕ್ಷ ಎನ್ ಸಿಪಿ ಕೂಡಾ ಹೊಸ ಆರೋಪ ಮಾಡಿದ್ದು, ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಮಾನಭಂಗ ಮಾಡಲು ಬಿಜೆಪಿಯೇ ತನ್ನ ಭ್ರಷ್ಟ ಹಣವನ್ನು ಈ ಸಿನಿಮಾಗೆ ಹೂಡಿಕೆ ಮಾಡಿದೆ ಎಂದು ಆರೋಪಿಸಿದೆ. ಮನಮೋಹನ್ ಸಿಂಗ್ ಪಾತ್ರದಲ್ಲಿ ಅಭಿನಯಿಸಿರುವ ಅನುಪಮ್ ಖೇರ್ ಬಿಜೆಪಿ ನಾಯಕ. ಈ ಹಿನ್ನಲೆಯಲ್ಲಿ ಸಿನಿಮಾ ಬಗ್ಗೆ ವಿಪಕ್ಷಗಳು ಅನುಮಾನ ವ್ಯಕ್ತಪಡಿಸುತ್ತಿವೆ. ಅದೇನೇ ಇರಲಿ, ಅನುಪಮ್ ಖೇರ್ ಪಕ್ಕಾ ಮನಮೋಹನ್ ಸಿಂಗ್ ರಂತೆ ಗೆಟಪ್ ಹಾಕಿಕೊಂಡಿರುವ ಚಿತ್ರದ ಟ್ರೈಲರ್ ಗಳು ಈಗಾಗಲೇ ಹಿಟ್ ಆಗಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ರಜನೀಕಾಂತ್ ರನ್ನು ಬೀಟ್ ಮಾಡಿದ ರಾಕಿಂಗ್ ಸ್ಟಾರ್ ಯಶ್!