Select Your Language

Notifications

webdunia
webdunia
webdunia
webdunia

ಸೋನಾಲಿ ಬೇಂದ್ರೆ ಜೊತೆ ಡಿನ್ನರ್ ಮಾಡಿದ ಅನುಪಮ್ ಖೇರ್..

ಸೋನಾಲಿ ಬೇಂದ್ರೆ ಜೊತೆ ಡಿನ್ನರ್ ಮಾಡಿದ ಅನುಪಮ್ ಖೇರ್..
ಬೆಂಗಳೂರು , ಬುಧವಾರ, 10 ಅಕ್ಟೋಬರ್ 2018 (15:12 IST)
ಅನುಪಮ್ ಖೇರ್ ಸದ್ಯ ನ್ಯೂಯಾರ್ಕ್‌ನಲ್ಲಿದ್ದು ವೈದ್ಯಕೀಯ ಪರೀಕ್ಷೆಗಾಗಿ ಈಗಾಗಲೇ ನ್ಯೂಯಾರ್ಕ್‌ಗೆ ತೆರಳಿದ್ದ ರಿಷಿ ಕಪೂರ್ ಅವರೊಂದಿಗೆ ಮ್ಯಾನ್ಹಾಟನ್‌ನಲ್ಲಿ ಓಡಾಡುತ್ತಿರುವ ವೀಡಿಯೊ ವೈರಲ್ ಆಗಿತ್ತು. ಇದೀಗ ವೈದ್ಯಕೀಯ ಚಿಕಿತ್ಸೆಗಾಗಿ ನ್ಯೂಯಾರ್ಕ್‌ನಲ್ಲಿರುವ ಇನ್ನೊಂದು ಬಾಲಿವುಡ್ ತಾರೆ ಸೋನಾಲಿ ಬೇಂದ್ರೆಯೊಂದಿಗಿರುವ ಫೋಟೋ ವೈರಲ್ ಆಗಿದೆ.
ಅನುಪಮ್ ಖೇರ್ ತಾವು ಸೋನಾಲಿ ಬೇಂದ್ರೆಯವರೊಂದಿಗಿರುವ ಫೋಟೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳಲ್ಲಿ ಸೋನಾಲಿ ಹಾಗೂ ಅನುಪಮ್ ಖೇರ್ ಇಬ್ಬರೂ ನಗುತ್ತಾ ಫೋಟೋಗೆ ಫೋಸ್ ನೀಡಿದ್ದು ಅವರೊಂದಿಗೆ ಸೋನಾಲಿ ಬೇಂದ್ರೆ ಪತಿ ಗೋಲ್ಡೀ ಬೇಲ್ ಸಹ ಕಂಡುಬಂದಿದ್ದಾರೆ. ಬಿಗ್ ಎಪಲ್‌ನಲ್ಲಿ ಇವರು ಡಿನ್ನರ್ ಮಾಡಿದ್ದು ಅಲ್ಲಿ ಫೋಟೋ ತೆಗೆದುಕೊಂಡಿದ್ದಾರೆ. "ಒತ್ತಡದ ಅಡಿಯಲ್ಲಿರುವ ಸೊಬಗು ನಿರ್ಭಯತೆಯ ಫಲಿತಾಂಶವಾಗಿದೆ. ಅತ್ಯಂತ ಸುಂದರವಾದ, ಸ್ಪೂರ್ತಿದಾಯಕವಾದ ಮತ್ತು ಧೈರ್ಯಶಾಲಿ @iamsonalibendre ಅವರೊಂದಿಗೆ ಸಹಾನುಭೂತಿಯ @GOLDIEBEHL ಮತ್ತು ಎಂದಿಗೂ ನಗುತ್ತಿರುವ ರೂಪಾ ಅವರ ಜೊತೆಗೆ ಊಟವನ್ನು ಮಾಡುವುದು ತುಂಬಾ ಅದ್ಭುತವಾಗಿದೆ ಮತ್ತು ರಿಫ್ರೆಶ್ ಆಗಿದೆ. #DeliciousFood #RichConversations #NYC." ಎನ್ನುವ ಹೇಳಿಕೆಯ ಅಡಿಯಲ್ಲಿ ಅನುಪಮ್ ಖೇರ್ ಸೋನಾಲಿ ಅವರೊಂದಿಗಿರುವ ತಮ್ಮ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
 
ಸೋನಾಲಿ ಬೇಂದ್ರೆ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದು ತಾವು ಗುಣಮುಖರಾಗುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಅವರು ಆಗಾಗ ತಮ್ಮ ವೀಡಿಯೊ, ಫೋಟೋ ಮತ್ತು ಭಾವನೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಆಸಿಡ್ ದಾಳಿ ಸಂತ್ರಸ್ತೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ದೀಪಿಕಾ ಪಡುಕೋಣೆ?