ಸೋನಾಲಿಯನ್ನು ನೋಡಿದರೆ ಎಂಥವರ ಹೃದಯವೂ ಕರಗುತ್ತದೆ. ಹಾಗಾದ್ರೆ ಅಂತದೇನಾಯ್ತು ?

ಗುರುವಾರ, 12 ಜುಲೈ 2018 (06:59 IST)
ಮುಂಬೈ : ಇತ್ತೀಚೆಗಷ್ಟೇ ತಾನು ಅಪಾಯಕಾರಿ ಕ್ಯಾನ್ಸರ್ ಗೆ ತುತ್ತಾಗಿದ್ದು, ನ್ಯೂಯಾರ್ಕ್ ನಲ್ಲಿ ಅದಕ್ಕೆ ಚಿಕಿತ್ಸೆ ಪಡೆಯುತ್ತಿರುವುದಾಗಿ ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದ ಬಾಲಿವುಡ್ ನಟಿ ಸೋನಾಲಿ ಬೇಂದ್ರೆ ಅವರು ಇದೀಗ ಫೋಟೋ ಹಾಗೂ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ. ಅದನ್ನು ನೋಡಿದರೆ ಎಂಥವರ ಹೃದಯವೂ ಚುರ್ ಎನ್ನುತ್ತದೆ.  ಹಾಗಾದ್ರೆ ಆ ವಿಡಿಯೋದಲ್ಲಿ ಅಂತದೇನಿದೆ.


ಈ ವಿಡಿಯೋದಲ್ಲಿ ನಟಿ ಸೋನಾಲಿ ಬೇಂದ್ರೆ ಅವರು ತುಂಬಾ ಭಾವುಕರಾಗಿದ್ದು, ಅದರಲ್ಲಿ ನಟಿ ಸೋನಾಲಿ ಅವರು ಇಷ್ಟು ವರ್ಷ ಸುಂದರವಾಗಿ, ದಟ್ಟವಾಗಿ ಬೆಳೆಸಿದ  ಕೂದಲನ್ನು ಚಿಕಿತ್ಸೆಗಾಗಿ  ಕಟ್ ಮಾಡಿಸುತ್ತಿದ್ದಾರೆ. ಆರಂಭದಲ್ಲಿ ನಗುತ್ತಿದ್ದ ಸೋನಾಲಿ ಕೊನೆಯಲ್ಲಿ ಕಣ್ಣೀರಿಟ್ಟಿದ್ದಾರೆ.


ಆಗ ಸೋನಾಲಿ ಅವರ ಜೊತೆ ಅವರ ತಂದೆ ಕೂಡ ಇದ್ದು, ಮಗಳಿಗೆ ಸಾಂತ್ವಾನ ಹೇಳಿದ್ದಾರೆ. ತಂದೆ ಸಾಂತ್ವಾನದ ನಂತರ ಸಂಭಾಲಿಸಿಕೊಂಡ ಸೋನಾಲಿ ಆಮೇಲೆ ಫೋಟೋಕ್ಕೆ ಫೋಸ್ ನೀಡಿದ್ದಾರೆ. ಹಾಗೇ ‘ಪ್ರತಿ ದಿನ ಹೊಸ ಸವಾಲು ಎದುರಾಗುತ್ತಿದೆ. ಅದಕ್ಕೆ ನಾನು ಸದಾ ಸಿದ್ಧಳಾಗಿರುತ್ತೇನೆ. ಸಕಾರಾತ್ಮಕವಾಗಿ ಹೋರಾಡಲು ಪ್ರಯತ್ನಿಸುತ್ತಿದ್ದೇನೆಂದು’ ಸೋನಾಲಿ ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ನಟ ದರ್ಶನ್ ಗೆ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿದ ಮ್ಯಾನೇಜರ್ ಮಲ್ಲಿಕಾರ್ಜುನ್