ಸಲ್ಮಾನ್ ಖಾನ್ ರನ್ನು ಹೀಗೆ ಕರೆದರೆ ಅವರಿಗೆ ಸಿಕ್ಕಾಪಟ್ಟೆ ಕೋಪಬರುತ್ತದೆಯಂತೆ!

ಬುಧವಾರ, 11 ಜುಲೈ 2018 (11:31 IST)
ಮುಂಬೈ : ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ಯಾರಾದರೂ ಅಂಕಲ್ ಎಂದು ಕರೆದರೆ ತುಂಬಾ ಸಿಟ್ಟುಬರುತ್ತದೆಯಂತೆ.


ಈ ವಿಚಾರವನ್ನು ಅವರು ದಸ್ ಕಾ ದಮ್ ರಿಯಾಲಿಟಿ ಕಾರ್ಯಕ್ರಮದಲ್ಲಿ ಮಾತನಾಡುವಾಗ ಹೇಳಿದ್ದಾರೆ. ನನಗೆ ಅಂಕಲ್ ಎಂಬ ಪದವೇ ಆಗೋದಿಲ್ಲ. ಈ ರೀತಿ ಯಾರಾದರೂ ಕರೆದರೆ ನನಗೆ ಸಿಕ್ಕಾಪಟ್ಟೆ ಇರಿಟೇಷನ್ ಆಗುತ್ತೆ. ತನ್ನ ಸುತ್ತಲಿರುವ ಮಕ್ಕಳಿಗೆ ನಾನು ಮೊದಲೇ ಹೇಳುತ್ತೇನೆ. ಯಾವುದೇ ಕಾರಣಕ್ಕೂ ನನ್ನ ಅಂಕಲ್ ಎಂದು ಕರೆಯಬೇಡಿ ಎಂದು. ಅಲ್ಲದೆ ನನ್ನ ಗೆಳೆಯರ ಮಕ್ಕಳಿಗೂ ಇದನ್ನೆ ಹೇಳಿದ್ದೇನೆ. ನನ್ನನ್ನು ಒಂದು ವೇಳೆ ಅಂಕಲ್ ಎಂದು ಕರೆದರೆ ಮತ್ತೆ ಯಾವುದೇ ಕಾರಣಕ್ಕೂ ನಾನು ಅವರನ್ನು ಭೇಟಿ ಮಾಡಲು ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.


ಇನ್ನು ಮದುವೆಯಾಗದೇ ಬ್ಯಾಚುಲರ್ ಆಗಿಯೇ ಇರುವ 52 ವರ್ಷದ ನಟ ಸಲ್ಮಾನ್ ಖಾನ್ ಅವರು ತಮ್ಮ ಫಿಟ್ ನೆಸ್ ನ್ನು ಕಾಪಾಡಿಕೊಳ್ಳುವುದರ ಮೂಲಕ 28 ವರ್ಷದ  ಯುವಕರಂತೆ ಕಾಣುತ್ತಿದ್ದಾರೆ. ಇಂದಿಗೂ ಸಲ್ಮಾನ್ ಎಂದರೆ ಯುವತಿಯರು ಮುಗಿಬೀಳುತ್ತಾರೆ. ಹೀಗಿರುವಾಗ ಅವರನ್ನು ಯಾರಾದರೂ ಅಂಕಲ್ ಎಂದು ಕರೆದರೆ ಅವರಿಗೆ ಸಿಕ್ಕಾಪಟ್ಟೆ ಕೋಪಬರುವುದು ಸಹಜವೇ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 
 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಸಲ್ಮಾನ್ ಖಾನ್ ಈ ಬಾಲಿವುಡ್ ನಟಿಯನ್ನು ಮದುವೆಯಾಗಬೇಕೆಂದು ಬಯಸಿದ್ದರಂತೆ!