ಸಲ್ಮಾನ್ ಖಾನ್ ಈ ಬಾಲಿವುಡ್ ನಟಿಯನ್ನು ಮದುವೆಯಾಗಬೇಕೆಂದು ಬಯಸಿದ್ದರಂತೆ!

ಬುಧವಾರ, 11 ಜುಲೈ 2018 (11:19 IST)
ಮುಂಬೈ : ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ ಅವರು ಐಶ್ವರ್ಯಾ ರೈ, ಕತ್ರಿನಾ ಕೈಫ್, ಸಂಗೀತ ಬಿಜಲಾನಿ ಜತೆಗೆ ಡೇಟಿಂಗ್ ಮಾಡಿದ ವಿಷಯ ಎಲ್ಲರಿಗೂ ತಿಳಿದೆ ಇದೆ. ಆದರೆ ಇವರು ಬಾಲಿವುಡ್ ನಟಿ ಜೂಹಿ ಚಾವ್ಲಾರನ್ನು ಮದುವೆಯಾಗಬೇಕು ಎಂದು ಬಯಸಿದ್ದರಂತೆ.


ಈ ವಿಚಾರವನ್ನು ಸ್ವತಃ ನಟ ಸಲ್ಮಾನ್ ಖಾನ್ ಅವರೇ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. ‘ಅಮೀರ್ ಖಾನ್ ಯಾವಾಗಲೂ ತನ್ನ ಪತ್ನಿ ಬಗ್ಗೆ ಹೇಳುತ್ತಲೇ ಇದ್ದ. ಹಾಗಾಗಿ ನನಗೂ ಮದುವೆಯಾಗಬೇಕೆಂದು, ನನಗೂ ಒಂದು ಕುಟುಂಬ ಬೇಕೆಂದು ಅನ್ನಿಸುತ್ತಿತ್ತು. ನಾನು ಜೂಹಿ ಚಾವ್ಲಾರನ್ನು ಮದುವೆಯಾಗಬೇಕು ಎಂದಿದ್ದೆ. ಆದರೆ ಅವರ ತಂದೆ ಒಪ್ಪಿಕೊಳ್ಳಲಿಲ್ಲ. ಅಳಿಯನಾಗಿ ನಾನು ಅವರಿಗೆ ಸರಿಹೊಂದಲ್ಲ ಎಂದುಕೊಂಡರು. ಇಷ್ಟಕ್ಕೂ ಅವರಿಗೆ ಏನು ಬೇಕಾಗಿತ್ತು ಎಂಬುದು ಸಹ ನನಗೆ ಅರ್ಥವಾಗಲಿಲ್ಲ' ಎಂದು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಬಾಲಿವುಡ್ ಈ ನಟನಿಂದ ರಾಣಿ ಮುಖರ್ಜಿ ಹೃದಯವೇ ಒಡೆದು ಹೋಯಿತಂತೆ!