ಚಶ್ಮಾ’ ಶೋ ನಲ್ಲಿ ನಟಿಸಿದ ಖ್ಯಾತ ನಟ ಕವಿ ಕುಮಾರ್ ಅಜಾದ್ ನಿಧನ

ಮಂಗಳವಾರ, 10 ಜುಲೈ 2018 (08:16 IST)
ಮುಂಬೈ : ತಾರಕ್  ಮೆಹ್ತಾ ಅವರ  ‘ಚಶ್ಮಾ’ ಶೋ ನಲ್ಲಿ ನಟಿಸಿದ ಖ್ಯಾತ ನಟ ಕವಿ ಕುಮಾರ್ ಅಜಾದ್ ಅವರು ಸೋಮವಾರದಂದು ಮೃತಪಟ್ಟಿದ್ದಾರೆ.


ತೀವ್ರ ಹೃದಯಾಘಾತಕ್ಕೆ ತುತ್ತಾಗಿದ್ದ ಕಿರುತೆರೆ ನಟ ಕವಿ ಕುಮಾರ್ ಅಜಾದ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಭಾನುವಾರ ರಾತ್ರಿ ಕೋಮಾ ಸ್ಥಿತಿಗೆ ಜಾರಿಗೆ ಕವಿ ಕುಮಾರ್ ಅಜಾದ್ ಅವರು ಮರುದಿನ ಸಾವನಪ್ಪಿದ್ದಾರೆ.


ಇವರು 'ಚಶ್ಮಾ' ಶೋ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದಿದ್ದರು. ಆಜಾದ್  ನಟಿಸುತ್ತಿದ್ದ 'ಚಶ್ಮಾ' ಶೋ ಇತ್ತೀಚಿಗಷ್ಟೇ 2500 ಎಪಿಸೋಡ್​ಗಳನ್ನು  ಕಂಪ್ಲೀಟ್  ಮಾಡಿದೆ. ಇವರು ಕೇವಲ ಕಿರುತೆರೆಗಷ್ಟೆಯಲ್ಲದೇ ಅಮಿರ್ ಖಾನ್ ಅವರ 'ಮೇಲಾ' ಸೇರಿದಂತೆ ಕೆಲ ಬಾಲಿವುಡ್  ಚಿತ್ರಗಳಲ್ಲಿ ನಟಿಸಿದ್ದರು. 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಶಿಲ್ಪಾ ಗಣೇಶ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಯಾರ ವಿರುದ್ಧ ಗೊತ್ತಾ?