Select Your Language

Notifications

webdunia
webdunia
webdunia
webdunia

ಬಾಲಿವುಡ್ ನ ಈ ನಟಿಯನ್ನ ಸಲ್ಮಾನ್ ಖಾನ್ ‘ಮೈ ಬೇಬಿ’ ಎಂದು ಕರೆದಿದ್ದಾರಂತೆ!

ಬಾಲಿವುಡ್ ನ ಈ ನಟಿಯನ್ನ ಸಲ್ಮಾನ್ ಖಾನ್ ‘ಮೈ ಬೇಬಿ’ ಎಂದು ಕರೆದಿದ್ದಾರಂತೆ!
ಮುಂಬೈ , ಮಂಗಳವಾರ, 10 ಜುಲೈ 2018 (08:02 IST)
ಮುಂಬೈ : ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡುವಾಗ ಬಾಲಿವುಡ್ ನ ನಟಿಯೊಬ್ಬರನ್ನು 'ಬೇಬಿ' ಎಂದು ಕರೆದಿದ್ದಾರೆ.


ಆ ನಟಿ ಬೇರೆ ಯಾರು ಅಲ್ಲ. ಈ ಹಿಂದೆ ಸಲ್ಮಾನ್ ಖಾನ್ ಅವರ ಜೊತೆ ಡೇಟಿಂಗ್ ನಲ್ಲಿದ್ದು ಸಾಕಷ್ಟು ಸುದ್ದಿಯಾದ ನಟಿ ಕತ್ರಿನಾ ಕೈಫ್. ದಬಂಗ್ ಟೂರ್ ನಲ್ಲಿ ಸಲ್ಮಾನ್, ಕತ್ರೀನಾ, ಹಾಗೂ ಸೋನಾಕ್ಷಿ ಸಿನ್ಹ ನಟಿಸಲಿದ್ದು ಈಗಾಗಲೇ ಇದರ ಚಿತ್ರೀಕರಣ ಕೂಡ ಆರಂಭಗೊಂಡಿದ್ದು ಅದಕ್ಕಾಗಿ ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಫ್ ದೇಶ ವಿದೇಶಗಳನ್ನು ಸುತ್ತುತ್ತಿದ್ದಾರೆ. ಈ ಸಂದರ್ಭದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಲ್ಮಾನ್ ಖಾನ್ ಅವರು ಕತ್ರಿನಾ ಕೈಫ್ ಅವರನ್ನು 'ಬೇಬಿ' ಎಂದು ಕರೆದಿದ್ದಾರೆ.


ಜುಲೈ 15ಕ್ಕೆ ಕತ್ರೀನಾ ಜನ್ಮದಿನವಿದೆ ಎಂದು ವರದಿಗಾರರೊಬ್ಬರು ವಿಷಯ ಪ್ರಸ್ತಾಪ ಮಾಡಿದಾಗ ತಕ್ಷಣವೇ ಪ್ರತಿಕ್ರಿಯೆ ನೀಡಿದ ಸಲ್ಮಾನ್ ಖಾನ್ 'My baby's birthday is on July 16' ಎಂದರು. ಅಂದರೆ ನಿಮಗೆ ಗೊಂದಲವಾಗಿರಬೇಕು ಆಕೆಯ ಬರ್ತ್ ಡೇ ಇರುವುದು ಜುಲೈ 16 ಕ್ಕೆ ಎಂದು ಸರಿ ಮಾಡಿದರು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ತುಳು ಹಾಗೂ ಕನ್ನಡ ಚಿತ್ರನಟ ಸದಾಶಿವ ಸಾಲ್ಯಾನ್ ಇನ್ನಿಲ್ಲ