Select Your Language

Notifications

webdunia
webdunia
webdunia
webdunia

ಜಾಹ್ನವಿ ಕಪೂರ್ ಸಿಮಾರಂಗಕ್ಕೆ ಬರುವುದು ಇವರಿಗೆ ಇಷ್ಟವಿರಲಿಲ್ಲವಂತೆ

ಜಾಹ್ನವಿ ಕಪೂರ್ ಸಿಮಾರಂಗಕ್ಕೆ ಬರುವುದು ಇವರಿಗೆ ಇಷ್ಟವಿರಲಿಲ್ಲವಂತೆ
ಮುಂಬೈ , ಸೋಮವಾರ, 9 ಜುಲೈ 2018 (19:07 IST)
ಮುಂಬೈ : ದಿ. ನಟಿ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಅವರು ಧಡಕ್ ಚಿತ್ರದ ಮೂಲಕ ಬಾಲಿವುಡ್ ಪದಾರ್ಪಣೆ ಮಾಡಿದ್ದಾರೆ. ಈ ಚಿತ್ರದ ಟ್ರೇಲರ್ ಈಗಾಗಲೇ  ಬಿಡುಗಡೆಗೊಂಡು ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುವುದರ ಮೂಲಕ ಜಾಹ್ನವಿ ಕಪೂರ್ ಅವರಿಗೆ ಅಭಿಮಾನಿಗಳ ಪ್ರೋತ್ಸಾಹವು ಸಿಕ್ಕಿದಂತಾಗಿದೆ.


ಆದರೆ ತಾಯಿ ಶ್ರೀದೇವಿ ಅವರಂತೆ ಮಹಾನ್ ನಟಿಯಾಗಬೇಕೆಂದು ಬಯಸಿದ ನಟಿ ಜಾಹ್ನವಿ ಕಪೂರ್ ಅವರು ಸಿನಿಮಾರಂಗಕ್ಕೆ ಬರುವುದು ಅವರ ತಾಯಿ ಶ್ರೀದೇವಿ ಅವರಿಗೆ ಇಷ್ಟವೇ ಇರಿಲ್ಲವಂತೆ. ಈ ಬಗ್ಗೆ ಜಾಹ್ನವಿ ಕಪೂರ್ ಅವರು ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.


‘ನಾನು ನಟನಾ ವೃತ್ತಿಯನ್ನು ಆಯ್ದುಕೊಳ್ಳುತ್ತೇವೆ ಎಂಬುದನ್ನು ಮೊದಲು ಹೇಳಿದ್ದೇ ನನ್ನ ತಾಯಿಗೆ. ಆಗ ಅಮ್ಮ ಹೇಳಿದ್ದು ಒಂದೇ, ದಯವಿಟ್ಟು ಮತ್ತೊಮ್ಮೆ ನಿನ್ನ ನಿರ್ಧಾರವನ್ನು ಮರುಪರಿಶೀಲಿಸು. ಅಪ್ಪ ಮತ್ತು ಅಮ್ಮ ನಾನು ತುಂಬಾ ಚಿಕ್ಕವಳು, ಎಂದುಕೊಂಡಿದ್ದರು, ನನ್ನ ತುಂಬಾ ಮುದ್ದು ಮಾಡುತ್ತಿದ್ದರು. ಹೀಗಾಗಿ ಇಂತಹದ್ದನ್ನೆಲ್ಲಾ ಡೀಲ್ ಮಾಡುತ್ತೇನೆ ಎಂಬ ಕಲ್ಪನೆ ಅವರಿಗಿರಲಿಲ್ಲ. ನಾನು ಫಿಲಂಮೇಕಿಂಗ್ ಎಂಬ ಸಮುದ್ರವನ್ನು ಈಜಲು ತಯಾರಾಗಿದ್ದೇನೆ ಎಂಬುದು ಅವರಿಗೆ ಕಲ್ಪನೆ ಇರಲಿಲ್ಲ.


ಹೀಗಾಗಿ ಅಮ್ಮ ನನ್ನ ನಿರ್ಧಾರದ ಬಗ್ಗೆ ಖುಷಿಯಾಗಿರಲಿಲ್ಲ. ನಮ್ಮ ಅಮ್ಮ ಯಾವಾಗಲೂ ಯೋಚಿಸುತ್ತಿದ್ದಿದ್ದು, ಆಕೆ ಮಕ್ಕಳ ಜೀವನ ಸುಖಕರವಾಗಿರಲಿ ಎಂಬ ಕಾರಣಕ್ಕೆ ತುಂಬಾ ಕಠಿಣವಾಗಿ ಕೆಲಸ ಮಾಡಿದ್ದೇನೆ ಎಂದು. ಆದರೆ ನನಗೆ ಅದು ಬೇಕಿಲ್ಲ. ನಾನು ನನ್ನ ಕನಸನ್ನು ನಾನೇ ಪೂರ್ಣ ಗೊಳಿಸಬೇಕು. ಕಷ್ಟಗಳ ಕುರಿತಂತೆ ನನಗೂ ಅನುಭವವಾಗಬೇಕಿದೆ. ನಾನು ಎಲ್ಲವನ್ನು ಪಡೆದುಕೊಂಡೇ ಬಂದಿದ್ದೇನೆ. ಆದರೆ ಪ್ರಯೋಗಗಳನ್ನು ಮಾಡುವ ಹಸಿವು ನನ್ನಲ್ಲಿ ಹಾಗೆ ಉಳಿದಿದೆ’ ಎಂದಿದ್ದಾರೆ ಜಾಹ್ನವಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ವಿಜಯ್ ಅಭಿನಯದ ‘ಸರ್ಕಾರ್’ ಚಿತ್ರಕ್ಕೆ ಎದುರಾಗಿದೆ ಸಂಕಷ್ಟ