Publish Date: Mon, 09 Jul 2018 (06:38 IST)
Updated Date: Mon, 09 Jul 2018 (06:41 IST)
ಮುಂಬೈ : ಈಗಾಗಲೇ ಐಪಿಲ್ ಬೆಟ್ಟಿಂಗ್ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ ಬಾಲಿವುಡ್ ನ ಸ್ಟಾರ್ ನಟ ಸಲ್ಮಾನ್ ಖಾನ್ ಅವರ ಸಹೋದರ ಅರ್ಬಾಜ್ ಖಾನ್ ಅವರು ಇದೀಗ ತಮ್ಮ ಸಹೋದರ ಸಲ್ಮಾನ್ ಖಾನ್ ಅವರ ಮೇಲೆ ಕೋಪಗೊಂಡಿದ್ದಾರಂತೆ.
ಇದಕ್ಕೆ ಕಾರಣವಿಷ್ಟೇ. ಅರ್ಬಾಜ್ ಖಾನ್ ನಿರ್ಮಾಣದಲ್ಲಿ ಮೂಡಿ ಬರಲಿರುವ ದಬಾಂಗ್-3 ಚಿತ್ರದ ಬಗ್ಗೆ ನಟ ಸಲ್ಮಾನ್ ಖಾನ್ ಅವರು ಆಸಕ್ತಿ ತೋರಿಸುತ್ತಿಲ್ಲವಂತೆ. ಈ ಚಿತ್ರದ ಚಿತ್ರೀಕರಣ ಮಾರ್ಚ್ ನಲ್ಲಿ ಆರಂಭವಾಗಬೇಕಿತ್ತು. ಆದರೆ ಈಗ ಜುಲೈ ಬಂದರೂ ಕೂಡ ಸಲ್ಮಾನ್ ಖಾನ್ ಅವರು ದಬಾಂಗ್-3 ರತ್ತ ಮುಖ ಮಾಡುತ್ತಿಲ್ಲ. ಇದರಿಂದ ಅರ್ಬಾಜ್ ಖಾನ್ ಸೋದರನ ಮೇಲೆ ಮುನಿಸಿಕೊಂಡಿದ್ದಾರಂತೆ.
ಸದ್ಯ ಸಲ್ಮಾನ್ ತನ್ನ ಹಿರಿಯ ಸಹೋದರಿ ಅಲ್ವೀರಾ ನಿರ್ಮಾಣದ 'ಭಾರತ್' ಶೂಟಿಂಗ್ ನಲ್ಲಿ ಸಕ್ರಿಯರಾಗಿದ್ದಾರೆ. ಭಾರತ್ ಬಳಿಕ ಬೇರೆ ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ ಎಂಬ ಸುದ್ದಿ ಕೂಡ ಹರಿದಾಡುತ್ತಿದೆ. ಸಲ್ಮಾನ್ ಖಾನ್ ದಬಾಂಗ್-3 ಸಿನಿಮಾದಿಂದ ದೂರ ಉಳಿಯುತ್ತೀರೋದಕ್ಕೆ ಕಾರಣ ಸಾಮಾಜಿಕ ಜಾಲತಾಣಗಳಲ್ಲಿ ಕೆಲ ಸಲ್ಮಾನ್ ಖಾನ್ ಅಭಿಮಾನಿಗಳು , ದಬಾಂಗ್-3 ಬೇಡ ಎಂದು ಹೇಳುತ್ತಿರುವುದು ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ