Select Your Language

Notifications

webdunia
webdunia
webdunia
webdunia

ಟೀಂ ಇಂಡಿಯಾ ಕ್ರಿಕೆಟಿಗ ಮೊಹಮ್ಮದ್ ಶಮಿ ಪತ್ನಿ ಬಾಲಿವುಡ್ ಗೆ

ಟೀಂ ಇಂಡಿಯಾ ಕ್ರಿಕೆಟಿಗ ಮೊಹಮ್ಮದ್ ಶಮಿ ಪತ್ನಿ ಬಾಲಿವುಡ್ ಗೆ
ಮುಂಬೈ , ಬುಧವಾರ, 11 ಜುಲೈ 2018 (09:25 IST)
ಮುಂಬೈ: ಗೃಹ ಹಿಂಸೆ, ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ಟೀಂ ಇಂಡಿಯಾ ಕ್ರಿಕೆಟಿಗ ಮೊಹಮ್ಮದ್ ಶಮಿ ಪತ್ನಿ ಹಸೀನ್ ಜಹಾನ್ ಶೀಘ್ರದಲ್ಲೇ ಬಾಲಿವುಡ್ ಗೆ ಎಂಟ್ರಿ ಕೊಡಲಿದ್ದಾರೆ.

ಮೂಲಗಳ ಪ್ರಕಾರ ಹಸೀನ್ ಈಗಾಗಲೇ ನಿರ್ದೇಶಕ ಅಮ್ಜಾದ್ ಖಾನ್ ರ ‘ಫತ್ವಾ’ ಎಂಬ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರಂತೆ. ಮಾಜಿ ಮಾಡೆಲ್ ಆಗಿರುವ ಹಸೀನ್ ಈ ಸಿನಿಮಾದಲ್ಲಿ ಪತ್ರಕರ್ತೆಯ ಪಾತ್ರ ವಹಿಸಲಿದ್ದಾರಂತೆ.

ಕೆಲವು ತಿಂಗಳುಗಳ ಹಿಂದೆ ಪತಿ ಶಮಿ ವಿರುದ್ಧ ಗೃಹ ಹಿಂಸೆ ಆರೋಪ ಹೊರಿಸಿದ್ದ ಹಸೀನ್ ದೇಶಾದ್ಯಂತ ಸುದ್ದಿಯಾಗಿದ್ದರು. ಆ ಪ್ರಕರಣದ ವಿಚಾರಣೆ ಇನ್ನೂ ನಡೆಯುತ್ತಿದೆ. ಇದೀಗ ಪತಿಯಿಂದ ದೂರವಾಗಿರುವ ಹಸೀನ್ ತಮ್ಮದೇ ಕ್ಷೇತ್ರದಲ್ಲಿ ಹೆಸರು ಮಾಡಲು ಹೊರಟಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

Share this Story:

Follow Webdunia kannada

ಮುಂದಿನ ಸುದ್ದಿ

ಬೇಬಿ ಬಂಪ್ ಪ್ರದರ್ಶಿಸಿದ ಟೆನಿಸ್ ತಾರೆ ಸಾನಿಯಾ ಮಿರ್ಜಾ