Publish Date: Tue, 10 Jul 2018 (10:18 IST)
Updated Date: Tue, 10 Jul 2018 (10:20 IST)
ಹೈದರಾಬಾದ್: ಭಾರತದ ಖ್ಯಾತ ಟೆನಿಸ್ ತಾರೆ, ಪಾಕ್ ಕ್ರಿಕೆಟಿಗ ಶೊಯೇಬ್ ಮಲಿಕ್ ಪತ್ನಿ ಸಾನಿಯಾ ಮಿರ್ಜಾ ಈಗ ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದು ಎಲ್ಲರಿಗೂ ಗೊತ್ತೇ ಇದೆ.
ಗರ್ಭಿಣಿಯಾದ ಬಳಿಕ ಟೆನಿಸ್ ಅಂಕಣದಿಂದ, ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ಸಾನಿಯಾ ಮಿರ್ಜಾ ಇದೀಗ ತಮ್ಮ ಬೇಬಿ ಬಂಪ್ ಅಂದರೆ ಉಬ್ಬು ಹೊಟ್ಟೆ ದರ್ಶನ ನೀಡಿದ್ದಾರೆ.
ಜೆಡಬ್ಲ್ಯೂ ಎಂಬ ನಿಯತಕಾಲಿಕಕ್ಕೆ ಸಾನಿಯಾ ತಮ್ಮ ಬೇಬಿ ಬಂಪ್ ತೋರುವ ಫೋಟೋ ಶೂಟ್ ಮಾಡಿಸಿದ್ದಾರೆ. ಅವರ ಈ ಫೋಟೋಗಳು ಇದೀಗ ನಿಯತಕಾಲಿಕದ ಮುಖಪುಟದಲ್ಲಿ ಪ್ರಕಟವಾಗಿದೆ. ಇತ್ತೀಚೆಗೆ ಸೆಲೆಬ್ರಿಟಿಗಳು ಬೇಬಿ ಬಂಪ್ ಫೋಟೋ ಶೂಟ್ ಮಾಡುವುದು ಸಾಮಾನ್ಯ. ಬಾಲಿವುಡ್ ನಟಿ ಕರೀನಾ ಕಪೂರ್ ಕೂಡಾ ಗರ್ಭಿಣಿಯಾಗಿದ್ದಾಗ ನಿಯತಕಾಲಿಕದ ಮುಖಪುಟಕ್ಕೆ ಇದೇ ರೀತಿ ಪೋಸ್ ಕೊಟ್ಟಿದ್ದರು. ಈಗ ಸಾನಿಯಾ ಸರದಿ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.