Publish Date: Tue, 10 Jul 2018 (09:33 IST)
Updated Date: Tue, 10 Jul 2018 (09:34 IST)
ಬ್ರಿಸ್ಟೋಲ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಪ್ರೇಮಿಗಳಿಗೆ ಆದರ್ಶವಾಗಿರುವವರು. ಆದರೆ ಧೋನಿ ಬರ್ತ್ ಡೇಯಲ್ಲಿ ಇವರಿಬ್ಬರ ಫೋಟೋ ನೋಡಿದವರು ಇದೀಗ ಟ್ರೋಲ್ ಮಾಡುತ್ತಿದ್ದಾರೆ.
ಮೊನ್ನೆಯಷ್ಟೇ ಬರ್ತ್ ಡೇ ಆಚರಿಸಿಕೊಂಡಿದ್ದ ಧೋನಿ ತಾವು ಉಳಿದುಕೊಂಡಿದ್ದ ಹೋಟೆಲ್ ನಲ್ಲಿ ಕ್ರಿಕೆಟಿಗರು, ಅವರ ಪತ್ನಿಯರ ಜತೆ ಪಾರ್ಟಿ ಮಾಡಿದ್ದರು. ಆದರೆ ಧೋನಿ ಕೇಕ್ ಕಟ್ ಮಾಡುವಾಗ ಜತೆಯಲ್ಲಿದ್ದ ವಿರಾಟ್-ಅನುಷ್ಕಾ ಜೋಡಿಯ ಫೋಟೋ ಇದೀಗ ಟ್ರೋಲ್ ಗೆ ತುತ್ತಾಗಿದೆ.
ಅಷ್ಟಕ್ಕೂ ಅಂತಹದ್ದೇನಿತ್ತು ಆ ಫೋಟೋದಲ್ಲಿ ಅಂತೀರಾ? ಒಂದೆಡೆ ಧೋನಿ ಕೇಕ್ ಕಟ್ ಮಾಡುತ್ತಿದ್ದರೆ ಹಿಂದೆ ನಿಂತಿದ್ದ ವಿರಾಟ್ ಕೊಹ್ಲಿ ಮೇಲೆ ಅನುಷ್ಕಾ ಕೋಪದಿಂದ ನೋಡುತ್ತಿರುವಂತೆ ಆ ಫೋಟೋದಲ್ಲಿ ಪೋಸ್ ಕೊಟ್ಟಿದ್ದಾರೆ.
ಇಷ್ಟೇ ಸಾಕಾಯ್ತು ನೋಡಿ ಟ್ರೋಲಿಗರಿಗೆ. ಸಾಮಾಜಿಕ ಜಾಲತಾಣದಲ್ಲಿ ಇದೇ ಫೋಟೋ ಇಟ್ಟುಕೊಂಡು ಟ್ರೋಲಿಗರು ತಮಗೆ ತೋಚಿದ ರೀತಿಯಲ್ಲಿ ಕಾಲೆಳೆಯುತ್ತಿದ್ದಾರೆ. ಹೆಂಡತಿಯ ಬರ್ತ್ ಡೇ ಮರೆತು ಗೆಳೆಯನ ಬರ್ತ್ ಡೇಯಲ್ಲಿ ಪಾಲ್ಗೊಂಡಾಗ ಹೆಂಡತಿ ಕಡೆಯಿಂದ ಇಂತಹದ್ದೇ ಲುಕ್ ಬರುತ್ತದೆ ಎಂದು ಕೆಲವರು ತಮಾಷೆ ಮಾಡಿದರೆ ಇನ್ನು ಕೆಲವರು ಮುಂಬೈನಲ್ಲಿ ಬೀದಿಯಲ್ಲಿ ಪ್ಲಾಸ್ಟಿಕ್ ಎಸೆಯುವವರು, ಆಹಾರ ವೇಸ್ಟ್ ಮಾಡುವವರನ್ನು ನೆನಪಿಸಿ ವಿರಾಟ್ ಗೆ ಅನುಷ್ಕಾ ಈ ರೀತಿ ಸಿಟ್ಟಿನಿಂದ ನೋಡುತ್ತಿರಬಹುದು ಎಂದು ಕಾಲೆಳೆದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.