Publish Date: Tue, 10 Jul 2018 (09:15 IST)
Updated Date: Tue, 10 Jul 2018 (09:20 IST)
ನವದೆಹಲಿ: ಸೂರ್ಯ ನಮಸ್ಕಾರ ಮಾಡಿ ಮುಸ್ಲಿಂ ಸಂಪ್ರದಾಯವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಇದೀಗ ಪಾಕ್ ಕ್ರಿಕೆಟಿಗರನ್ನು ಹೊಗಳಿ ಟ್ರೋಲ್ ಗೊಳಗಾಗಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿ ಗೆದ್ದ ಪಾಕಿಸ್ತಾನ ತಂಡಕ್ಕೆ ಟ್ವಿಟರ್ ಮೂಲಕ ಅಭಿನಂದನೆ ಸಲ್ಲಿಸಿದ್ದ ಮೊಹಮ್ಮದ್ ಕೈಫ್ ವಿಶೇಷವಾಗಿ ಪಾಕ್ ಕ್ರಿಕೆಟಿಗ ಫಕಾರ್ ಝಮನ್ ಬಗ್ಗೆ ಹೊಗಳಿಕೆ ನೀಡಿದ್ದರು.
ಇದನ್ನು ನೋಡಿದ ಟ್ವಿಟರಿಗರು ಕೈಫ್ ರನ್ನು ದೇಶ ದ್ರೋಹಿ ಎಂದು ಜರೆದಿದ್ದಾರೆ. ಕೆಲವರು ಪಾಕಿಸ್ತಾನ ಗೆದ್ದರೆ ನೀವೇಕೆ ಇಷ್ಟು ಖುಷಿ ಪಡಬೇಕು ಎಂದು ಪ್ರಶ್ನೆ ಮಾಡಿದ್ದರೆ, ಇನ್ನು ಕೆಲವರು ನಿಮ್ಮಿಂದ ಈ ಪಾಕ್ ಪ್ರೇಮ ನಿರೀಕ್ಷಿಸಿರಲಿಲ್ಲ ಎಂದು ಟೀಕಿಸಿದ್ದಾರೆ. ಅಂತೂ ಪಾಕ್ ತಂಡವನ್ನು ಹೊಗಳಲು ಹೋಗಿ ಕೈಫ್ ಚೆನ್ನಾಗಿಯೇ ಉಗಿಸಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.