Publish Date: Mon, 09 Jul 2018 (08:51 IST)
Updated Date: Mon, 09 Jul 2018 (08:54 IST)
ಬ್ರಿಸ್ಟೋಲ್: ಇಂಗ್ಲೆಂಡ್ ಪ್ರವಾಸದ ಮೊದಲ ಪುಟವನ್ನು ಟೀಂ ಇಂಡಿಯಾ ಯಶಸ್ವಿಯಾಗಿ ಮುಗಿಸಿದೆ. ಟಿ20 ಸರಣಿ ಗೆದ್ದು ಶುಭಾರಂಭ ಮಾಡಿದೆ. ಈ ಗೆಲುವಿನೊಂದಿಗೆ ಟೀಂ ಇಂಡಿಯಾ ಯಾವುದೆಲ್ಲಾ ದಾಖಲೆಗಳನ್ನು ಮಾಡಿತು ನೋಡೋಣ.
ರೋಹಿತ್ ಶರ್ಮಾ ನಿನ್ನೆ ಶತಕ ಗಳಿಸುವ ಮೂಲಕ ಟಿ20 ಕ್ರಿಕೆಟ್ ನಲ್ಲಿ ಅತೀ ಹೆಚ್ಚು ಶತಕ ಗಳಿಸಿದ ಕ್ರಿಕೆಟಿಗರ ಪೈಕಿ ಎರಡನೆಯವರೆನಿಸಿದರು. ಕ್ಯಾಲಿನ್ ಮುನ್ರೋ ಮೂರು ಶತಕ ಗಳಿಸಿ ಗರಿಷ್ಠ ಶತಕ ಗಳಿಸಿದವರ ಪಟ್ಟಿಯಲ್ಲಿರುವ ಇನ್ನೊಬ್ಬ ಆಟಗಾರ. ಕೆಎಲ್ ರಾಹುಲ್ ಭಾರತದ ಪರ ಈ ಪಟ್ಟಿಯಲ್ಲಿ ಎರಡು ಶತಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಅಷ್ಟೇ ಅಲ್ಲದೆ, ಎಲ್ಲಾ ಮೂರು ಮಾದರಿಯ ಕ್ರಿಕೆಟ್ ನಲ್ಲಿ ಮೂರು ಶತಕ ಗಳಿಸಿದ ಏಕೈಕ ಕ್ರಿಕೆಟಿಗ ಎಂಬ ದಾಖಲೆಯನ್ನೂ ರೋಹಿತ್ ಮಾಡಿದರು.
ಈ ಟಿ20 ಸರಣಿ ಗೆಲ್ಲುವ ಮೂಲಕ ಭಾರತ ಸತತ 6 ಟಿ20 ಸರಣಿಗಳನ್ನು ಗೆದ್ದ ದಾಖಲೆ ಮಾಡಿತು. ಪಾಕಿಸ್ತಾನ 9 ಸತತ ಸರಣಿ ಗೆಲುವುಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಭಾರತ ಇದೀಗ ದ್ವಿತೀಯ ಸ್ಥಾನದಲ್ಲಿದೆ. ಭಾರತ 198 ರನ್ ಗಳನ್ನು ಯಶಸ್ವಿಯಾಗಿ ಚೇಸ್ ಮಾಡುವ ಮೂಲಕ ಮೂರನೇ ಬೆಸ್ಟ್ ಗರಿಷ್ಠ ರನ್ ಚೇಸಿಂಗ್ ಮಾಡಿತು. ಇನ್ನು ಹಾರ್ದಿಕ್ ಪಾಂಡ್ಯ ನಾಲ್ಕು ವಿಕೆಟ್ ಮತ್ತು 33 ರನ್ ಗಳೊಂದಿಗೆ ಜೀವನ ಶ್ರೇಷ್ಠ ಪ್ರದರ್ಶನ ತೋರಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.