Publish Date: Sun, 08 Jul 2018 (11:38 IST)
Updated Date: Sun, 08 Jul 2018 (11:40 IST)
ಬ್ರಿಸ್ಟೋಲ್: ಟೀಂ ಇಂಡಿಯಾ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಇತ್ತೀಚೆಗೆ ಧೋನಿ ಪುತ್ರಿ ಜೀವಾ ಜತೆಗೆ ಆಟವಾಡುವ ಫೋಟೋಗಳು ವೈರಲ್ ಆಗಿತ್ತು. ಈಗ ಅಪ್ಪ ಧೋನಿಯ ಸರದಿ.
ಮೂರನೇ ಟಿ20 ಪಂದ್ಯಕ್ಕೆ ಮೊದಲು ಧೋನಿ ಹೊಸ ಹೇರ್ ಸ್ಟೈಲ್ ನಲ್ಲಿ ಮಿಂಚಲಿದ್ದಾರೆ. ಅವರಿಗೆ ಹೀಗೆ ಹೇರ್ ಕಟಿಂಗ್ ಮಾಡಿರೋದು ಹಾರ್ದಿಕ್ ಪಾಂಡ್ಯ!
ಹಾರ್ದಿಕ್ ಮೂರನೇ ಪಂದ್ಯದಕ್ಕೆ ಮೊದಲು ಧೋನಿ ಹೇರ್ ಕಟಿಂಗ್ ಮಾಡುತ್ತಿರುವ ಫೋಟೋಗಳು ಇದೀಗ ವೈರಲ್ ಆಗಿವೆ. ಅಷ್ಟೇ ಅಲ್ಲ ಈ ಫೋಟೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿರುವ ಹಾರ್ದಿಕ್ ಧೋನಿಗೆ ಇದುವೇ ನನ್ನ ಬರ್ತ್ ಡೇ ಗಿಫ್ಟ್ ಎಂದು ಬರೆದುಕೊಂಡಿದ್ದಾರೆ. ಈ ಫೋಟೋಗೆ ಸಾವಿರಾರು ಮಂದಿ ಲೈಕ್ ಕೊಟ್ಟಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.