Publish Date: Sat, 07 Jul 2018 (09:35 IST)
Updated Date: Sat, 07 Jul 2018 (09:36 IST)
ಮುಂಬೈ: ಟೀಂ ಇಂಡಿಯಾದಲ್ಲಿ ಕೆಎಲ್ ರಾಹುಲ್ ಅವರ ಇತ್ತೀಚೆಗಿನ ಫಾರ್ಮ್ ನೋಡಿ ಅವರ ಬಗ್ಗೆಯೇ ಎದುರಾಳಿಗಳೂ ಚರ್ಚೆ ಮಾಡುವಂತೆ ಮಾಡಿದೆ. ಇವರ ಬಗ್ಗೆ ಇದೀಗ ಸುನಿಲ್ ಗವಾಸ್ಕರ್ ಎಂತಹಾ ಮಾತನಾಡಿದ್ದಾರೆ ಗೊತ್ತಾ?
ಹಿಂದೊಮ್ಮೆ ಇದೇ ಸುನಿಲ್ ಗವಾಸ್ಕರ್ ಕೆಎಲ್ ರಾಹುಲ್ ಬಗ್ಗೆ ಪರೋಕ್ಷವಾಗಿ ಸ್ಟೈಲ್ ಮಾಡುವವರಿಗಷ್ಟೇ ಟೀಂ ಇಂಡಿಯಾದಲ್ಲಿ ಸ್ಥಾನ ಸಿಗುತ್ತಿದೆ. ಅಜಿಂಕ್ಯಾ ರೆಹಾನೆಯಂತಹ ಪ್ರತಿಭಾವಂತರನ್ನು ಹೊರಗಿಟ್ಟು ರಾಹುಲ್ ರನ್ನು ಆಡಿಸುವ ಅಗತ್ಯವೇನಿದೆ ಎಂದಿದ್ದರು.
ಇಂಗ್ಲೆಂಡ್ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ಶತಕ ಸಿಡಿಸಿದ ಮೇಲೆ ಗವಾಸ್ಕರ್ ವರಸೆಯೇ ಬದಲಾಗಿದೆ. ಇದೀಗ ಅದೇ ಗವಾಸ್ಕರ್ ರಾಹುಲ್ ರನ್ನು ಟೀಂ ಇಂಡಿಯಾದಲ್ಲಿ ಭವಿಷ್ಯದ ಪ್ರಮುಖ ಆಟಗಾರ. ರಾಹುಲ್ ಮಿನಿ ಮಾಸ್ಟರ್ ಪೀಸ್ ಎಂದು ಹಾಡಿ ಹೊಗಳಿದ್ದಾರೆ. ಆಂಗ್ಲ ಮಾಧ್ಯಮವೊಂದರ ಅಂಕಣದಲ್ಲಿ ಗವಾಸ್ಕರ್ ಈ ರೀತಿ ಬರೆದುಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.