Publish Date: Sat, 07 Jul 2018 (09:31 IST)
Updated Date: Sat, 07 Jul 2018 (09:32 IST)
ಇಸ್ಲಾಮಾಬಾದ್: ಸಚಿನ್ ತೆಂಡುಲ್ಕರ್ ಮತ್ತು ವೀರೇಂದ್ರ ಸೆಹ್ವಾಗ್ ಎಂದರೆ ಈಗಲೂ ಜಾಗತಿಕ ಕ್ರಿಕೆಟ್ ನಲ್ಲಿ ವಿಶೇಷ ಸ್ಥಾನವಿದೆ. ಮನಸ್ಸು ಮಾಡಿದರೆ ಇವರಿಬ್ಬರನ್ನೂ ಮೀರಿಸುವ ಸಾಮರ್ಥ್ಯ ಪಾಕಿಸ್ತಾನದ ಅಹಮ್ಮದ್ ಶಹಜಾದ್ ಗೆ ಇದೆಯಂತೆ.
ಹಾಗಂತ ಪಾಕ್ ನ ಮಾಜಿ ಕ್ರಿಕೆಟಿಗ ಅಬ್ದುಲ್ ರಜಾಕ್ ಹೇಳಿಕೊಂಡಿದ್ದಾರೆ. ಶಹಜಾದ್ ರ ಪ್ರತಿಭೆ ನೋಡಿದರೆ ಅವರಿಗೆ ಸಚಿನ್, ಸೆಹ್ವಾಗ್ ರನ್ನೂ ಮೀರಿಸುವ ಸಾಮರ್ಥ್ಯವಿದೆ ಎಂದು ರಜಾಕ್ ಹೇಳಿಕೊಂಡಿದ್ದಾರೆ.
ಟಿವಿ ಸಂದರ್ಶನವೊಂದರಲ್ಲಿ ರಜಾಕ್ ಈ ರೀತಿ ಅತಿರೇಕದ ಹೋಲಿಕೆ ಮಾಡಿದ್ದಾರೆ. ರಜಾಕ್ ಹೇಳಿದ್ದು ಕೇಳಿ ಸ್ವತಃ ನಿರೂಪಕರಿಗೇ ಶಾಕ್ ಆಯಿತು. ಅದಕ್ಕೆ ಸಮಜಾಯಿಷಿ ಕೊಟ್ಟ ರಜಾಕ್, ಮೊದಲು ಶಹಜಾದ್ ರಲ್ಲೂ ಇಷ್ಟೇ ಪ್ರತಿಭೆ ಇತ್ತು. ಉಮರ್ ಅಕ್ಮಲ್ ಕೂಡಾ ಇಷ್ಟೇ ಸಾಮರ್ಥ್ಯವುಳ‍್ಳ ಆಟಗಾರರಾಗಿದ್ದರು. ಆದರೆ ಅವರೇ ಕೈಯಾರೆ ತಮ್ಮ ವೃತ್ತಿ ಜೀವನ ಹಾಳುಮಾಡಿಕೊಂಡರು ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.