Publish Date: Mon, 02 Jul 2018 (09:06 IST)
Updated Date: Mon, 02 Jul 2018 (09:07 IST)
ಮುಂಬೈ: ಸಚಿನ್ ತೆಂಡುಲ್ಕರ್ ಯುವ ಕ್ರಿಕೆಟಿಗರಿಗೆ ಉತ್ತೇಜನ ಕೊಡುವುದರಲ್ಲಿ ಸದಾ ಮುಂದು. ಆದರೆ ಇಲ್ಲೊಬ್ಬ 2 ವರ್ಷದ ಪುಟಾಣಿಯ ಟ್ಯಾಲೆಂಟ್ ನೋಡಿ ಸಚಿನ್ ಹೇಳಿದ್ದೇನು ಗೊತ್ತಾ?
ಹಶೀಮ್ ಎಂಬ ಸಚಿನ್ ಅಭಿಮಾನಿ ತನ್ನ ಸಂಬಂಧಿಗಳ 2 ವರ್ಷದ ಪುಟಾಣಿ ಕ್ರಿಕೆಟ್ ಆಡುವ ವಿಡಿಯೋವನ್ನು ಟ್ವಿಟರ್ ನಲ್ಲಿ ಅಪ್ ಲೋಡ್ ಮಾಡಿ ಸಚಿನ್, ವಿರಾಟ್ ಕೊಹ್ಲಿ, ಧೋನಿಗೆ ಟ್ಯಾಗ್ ಮಾಡಿದ್ದರು.
ಈ ವಿಡಿಯೋ ನೋಡಿದ ಸಚಿನ್ ಪ್ರತಿಕ್ರಿಯೆ ನೀಡಿದ್ದಾರೆ. ಎರಡು ವರ್ಷದ ಈ ಪುಟಾಣಿ ಸ್ಟ್ರೈಟ್ ಡ್ರೈವ್, ಲಾಫ್ಟ್ ಶಾಟ್ ಎಲ್ಲಾ ಪರ್ಫೆಕ್ಟ್ ಆಗಿ ಆಡುತ್ತಾನೆ. ಇವನು ಆಧುನಿಕ ಯುಗಕ್ಕೆ ಹೇಳಿ ಮಾಡಿಸಿದ ಆಟಗಾರ. ಅವನಿಗೆ ಪ್ರೋತ್ಸಾಹ ಕೊಡಿ ಎಂದು ಸಚಿನ್ ಟ್ವಿಟರ್ ಮೂಲಕ ಪುಟಾಣಿಗೆ ಸಲಹೆ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.