Publish Date: Sat, 30 Jun 2018 (11:33 IST)
Updated Date: Sat, 30 Jun 2018 (11:35 IST)
ಡುಬ್ಲಿನ್: ಟೀಂ ಇಂಡಿಯಾ ವಿಕೆಟ್ ಕೀಪರ್ ಧೋನಿ ಸಾಮಾನ್ಯವಾಗಿ ಆಡುವ ಬಳಗದಲ್ಲಿರುತ್ತಾರೆ. ಆದರೆ ನಿನ್ನೆಯ ಪಂದ್ಯದ ಮಟ್ಟಿಗೆ ಅವರು ವಾಟರ್ ಬಾಯ್ ಆಗಿದ್ದರು!
ಐರ್ಲೆಂಡ್ ವಿರುದ್ಧ ದ್ವಿತೀಯ ಟಿ20 ಪಂದ್ಯದಿಂದ ಧೋನಿಯನ್ನು ಹೊರಗಿಟ್ಟಿದ್ದು ಅಚ್ಚರಿಗೆ ಕಾರಣವಾಗಿತ್ತು. ಆದರೆ ಅದಕ್ಕಿಂತಲೂ ಹೆಚ್ಚಿನ ಅಚ್ಚರಿಯಾಗಿದ್ದು, ಧೋನಿ ಸಹ ಆಟಗಾರರಿಗೆ ನೀರು ಸಪ್ಲೈ ಮಾಡುವ ಕೆಲಸ ಮಾಡುವಾಗ.
ಹೌದು. ನಿನ್ನೆಯ ಪಂದ್ಯದಲ್ಲಿ ಆಡುವ ಬಳಗದಲ್ಲಿ ಸ್ಥಾನ ಪಡೆಯದ ಧೋನಿ ಮನೀಶ್ ಪಾಂಡೆ, ಸುರೇಶ್ ರೈನಾ ಬ್ಯಾಟಿಂಗ್ ಮಾಡುತ್ತಿದ್ದಾಗ ಡ್ರಿಂಕ್ಸ್ ಬ್ರೇಕ್ ನಡುವೆ ದೊಡ್ಡ ಕಿಟ್ ಬ್ಯಾಗ್ ಮತ್ತು ನೀರು ಹೊತ್ತುಕೊಂಡು ಸಹ ಆಟಗಾರರಿಗೆ ನೀರು ಸರ್ವ್ ಮಾಡಿದರು. ಧೋನಿ ಇಂತಹದ್ದೊಂದು ಕೆಲಸ ಮಾಡಿದ್ದು ಅಪರೂಪ. ಕಳೆದ ವರ್ಷ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಒಮ್ಮೆ ಧೋನಿ ಈ ಕೆಲಸ ಮಾಡಿದ್ದರು. ಆದರೂ ಈ ಹಿರಿಯ ಆಟಗಾರ ಎಷ್ಟು ಡೌನ್ ಟು ಅರ್ಥ್ ಎನ್ನುವುದು ಇದರಿಂದ ಸಾಬೀತಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.