Publish Date: Sat, 30 Jun 2018 (09:05 IST)
Updated Date: Sat, 30 Jun 2018 (09:07 IST)
ಡುಬ್ಲಿನ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತೆ ಐರ್ಲೆಂಡ್ ವಿರುದ್ಧದ ದ್ವಿತೀಯ ಟಿ20 ಪಂದ್ಯದಲ್ಲೂ ವಿಫಲರಾಗಿದ್ದಾರೆ.ಈ ಮೂಲಕ ದಾಖಲೆ ಮಾಡುವ ಅವಕಾಶವೊಂದನ್ನು ಮಿಸ್ ಮಾಡಿಕೊಂಡಿದ್ದಾರೆ.
ಮೊದಲ ಟಿ20 ಪಂದ್ಯದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದು ಶೂನ್ಯಕ್ಕೆ ನಿರ್ಗಮಿಸಿದ್ದ ಕೊಹ್ಲಿ, ದ್ವಿತೀಯ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದರೂ ಕೊಹ್ಲಿ ಅದೃಷ್ಟ ಖುಲಾಯಿಸಲಿಲ್ಲ. ನಿನ್ನೆಯೂ 9 ರನ್ ಗೆ ಔಟಾದರು.
ಈ ಪಂದ್ಯದಲ್ಲಿ 17 ರನ್ ಗಳಿಸಿದ್ದರೆ ಕೊಹ್ಲಿ ಟಿ20 ಕ್ರಿಕೆಟ್ ನಲ್ಲಿ ಅತೀ ವೇಗದ 2000 ರನ್ ಪೂರೈಸಿದ ದಾಖಲೆ ಮಾಡುತ್ತಿದ್ದರು. ಆದರೆ ವಿಪರ್ಯಾಸವೆಂದರೆ ನಿನ್ನೆಯೂ ಕೊಹ್ಲಿಯ ಆಸೆ ಕೈಗೂಡಲಿಲ್ಲ. ಇನ್ನೂ ಅವರಿಗೆ ಆ ದಾಖಲೆ ಮಾಡಲು 9 ರನ್ ಬೇಕು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.