Publish Date: Sat, 30 Jun 2018 (09:23 IST)
Updated Date: Sat, 30 Jun 2018 (09:24 IST)
ಡುಬ್ಲಿನ್: ಐರ್ಲೆಂಡ್ ವಿರುದ್ಧ ಮೊದಲ ಟಿ20 ಪಂದ್ಯ ಗೆದ್ದ ಖುಷಿಯಲ್ಲಿ ಟೀಂ ಇಂಡಿಯಾ ದ್ವಿತೀಯ ಪಂದ್ಯಕ್ಕೂ ಮೊದಲು ಹೆಚ್ಚು ತಯಾರಿ ನಡೆಸಿದಂತೆ ಕಂಡುಬರಲಿಲ್ಲ.
ದ್ವಿತೀಯ ಪಂದ್ಯಕ್ಕೆ ಮೊದಲು ನೆಟ್ಸ್ ನಲ್ಲಿ ಬೆವರಿಳಿಸುವ ಬದಲು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಕ್ರಿಕೆಟಿಗರು ಐರ್ಲೆಂಡ್ ನಲ್ಲಿ ಸುತ್ತಾಡಿ ಸಮಯ ಕಳೆದಿದ್ದಾರೆ.
ಕೆಎಲ್ ರಾಹುಲ್, ಶಿಖರ್ ಧವನ್, ಹಾರ್ದಿಕ್ ಪಾಂಡ್ಯ ಜತೆಗಿರುವ ಫೋಟೋ ಹಾಕಿದ್ದ ಕೊಹ್ಲಿ ಸುಂದರ ದಿನ ಎಂದು ಬರೆದುಕೊಂಡಿದ್ದಾರೆ. ಈ ಫೋಟೋದಲ್ಲಿ ಕ್ರಿಕೆಟಿಗರೆಲ್ಲರೂ ಜಾಲಿಯಾಗಿ ಸುತ್ತಾಡಿರುವುದು ಸ್ಪಷ್ಟವಾಗಿದೆ. ಇಂಗ್ಲೆಂಡ್ ಸರಣಿಗೆ ಮೊದಲು ಟೀಂ ಇಂಡಿಯಾ ಆಟಗಾರರು ಕೊಂಚ ರಿಲ್ಯಾಕ್ಸ್ ಮೂಡ್ ನಲ್ಲಿರುವುದು ಕಂಡುಬರುತ್ತಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.