Publish Date: Sun, 01 Jul 2018 (09:09 IST)
Updated Date: Sun, 01 Jul 2018 (09:11 IST)
ಡುಬ್ಲಿನ್: ಕೊನೆಗೂ ತಮ್ಮ ಬೆಂಚ್ ಕಾಯಿಸುವ ಹುಡುಗರ ಕಷ್ಟ ಏನೆಂದು ಟೀಂ ಇಂಡಿಯಾ ಕ್ರಿಕೆಟಿಗರ ಪೈಕಿ ಕೇಳಿದರೆ ಮೊದಲು ಉತ್ತರ ಹೇಳುವುದು ಕೆಎಲ್ ರಾಹುಲ್ ಇರಬಹುದು.
ಪ್ರತಿಭೆಯಿದ್ದೂ ರಾಹುಲ್ ಅವಕಾಶ ಪಡೆದಿರುವುದಕ್ಕಿಂತ ಹೆಚ್ಚು ಬೆಂಚ್ ಕಾಯಿಸಿದ್ದೇ ಹೆಚ್ಚು. ಆದರೆ ಐರ್ಲೆಂಡ್ ವಿರುದ್ಧ ದ್ವಿತೀಯ ಟಿ20 ಪಂದ್ಯದಲ್ಲಿ ಕೊನೆಗೂ ತಮ್ಮ ಮೆಚ್ಚಿನ ಆರಂಭಿಕ ಸ್ಥಾನ ಸಿಕ್ಕಿದ್ದಕ್ಕೆ ಖುಷಿಯಾಗಿದ್ದರು.
‘ಇಂತಹ ಪ್ರತಿಭಾವಂತರ ತಂಡದಲ್ಲಿ ಅವಕಾಶ ಸಿಗುವುದೇ ಕಷ್ಟ ಎಂದು ನನಗೆ ಗೊತ್ತು. ಅವಕಾಶ ಸಿಕ್ಕಾಗ ಬಳಸಿಕೊಳ್ಳಲು ಸಾಧ್ಯವಾಗಿದ್ದಕ್ಕೆ ಖುಷಿಯಾಗಿದೆ. ತಂಡದಿಂದ ಹೊರಗೆ ಇದ್ದಾಗಲೆಲ್ಲಾ ಮರಳಿ ಬರುವುದಕ್ಕೆ ಕಠಿಣ ಪರಿಶ್ರಮ ಪಡುತ್ತಿರುತ್ತೇನೆ’ ಎಂದು ರಾಹುಲ್ ಹೇಳಿಕೊಂಡಿದ್ದಾರೆ.
ಅಷ್ಟೇ ಅಲ್ಲದೆ ಇದೇ ಮೊದಲ ಬಾರಿಗೆ ಇಂಗ್ಲೆಂಡ್ ನಲ್ಲಿ ಆಡುತ್ತಿರುವ ಬಗ್ಗೆಯೂ ಉತ್ಸುಕರಾಗಿರುವುದಾಗಿ ಹೇಳಿಕೊಂಡಿದ್ದಾರೆ. ತಾನು ಸೇರಿದಂತೆ ಟೀಂ ಇಂಡಿಯಾದ ಯುವ ಆಟಗಾರರೆಲ್ಲರೂ ಈ ಬಗ್ಗೆ ಎಕ್ಸೈಟ್ ಆಗಿದ್ದೀವಿ. ಇದು ನಮ್ಮ ಸಾಮರ್ಥ್ಯಕ್ಕೆ ಸವಾಲು ನೀಡುವ ಸಂದರ್ಭ. ಅದನ್ನು ನಿಭಾಯಿಸಿಯೇ ಬಿಡುತ್ತೇವೆ ಎಂದು ವಿಶ್ವಾಸದಿಂದಲೇ ರಾಹುಲ್ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.