Publish Date: Fri, 06 Jul 2018 (10:13 IST)
Updated Date: Fri, 06 Jul 2018 (15:42 IST)
ಕಾರ್ಡಿಫ್: ಇಂದು ಇಂಗ್ಲೆಂಡ್ ವಿರುದ್ಧ ದ್ವಿತೀಯ ಟಿ20 ಪಂದ್ಯವಾಡಲಿರುವ ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಧೋನಿ ಹೊಸ ದಾಖಲೆ ಬರೆಯಲು ಸಿದ್ಧರಾಗಿದ್ದಾರೆ.
ಮೊನ್ನೆಯಷ್ಟೇ ಅತೀ ಹೆಚ್ಚು ಸ್ಟಂಪ್ ಔಟ್ ಮಾಡಿದ ದಾಖಲೆ ಮಾಡಿದ್ದ ಧೋನಿ, ಈ ಪಂದ್ಯದ ಮೂಲಕ ಅತೀ ಹೆಚ್ಚು ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವಾಡಿದ ಪಟ್ಟಿಯಲ್ಲಿ ಸ್ಥಾನ ಪಡೆಯಲಿದ್ದಾರೆ.
ಸದ್ಯಕ್ಕೆ 500 ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯವಾಡಿದ ದಾಖಲೆಯಲ್ಲಿ ಮೊದಲ ಸ್ಥಾನ ಸಚಿನ್ ತೆಂಡುಲ್ಕರ್ ಅಗ್ರ ಸ್ಥಾನದಲ್ಲಿದ್ದಾರೆ. ಭಾರತೀಯರ ಪೈಕಿ ದ್ರಾವಿಡ್ ದ್ವಿತೀಯ ಸ್ಥಾನದಲ್ಲಿದ್ದಾರೆ. ಜಾಗತಿಕ ಮಟ್ಟದ ಆಟಗಾರರ ಪೈಕಿ ಮಹೇಲಾ ಜಯವರ್ಧನೆಗೆ ಎರಡನೇ ಸ್ಥಾನ.
ಇದುವರೆಗೆ 499 ಅಂತಾರಾಷ್ಟ್ರೀಯ ಪಂದ್ಯವಾಡಿರುವ ಧೋನಿಗೆ ಇಂದಿನ ಪಂದ್ಯ 500 ನೇ ಪಂದ್ಯವಾಗಲಿದೆ. ಸಚಿನ್ 664 ಪಂದ್ಯವಾಡಿದ್ದರೆ ದ್ರಾವಿಡ್ 509 ಪಂದ್ಯಗಳನ್ನಾಡಿದ್ದರು. ಇಂದು 500 ರ ಗುಂಪು ಸೇರಿದ ವಿಶ್ವದ ಒಂಭತ್ತನೇ ಆಟಗಾರ ಎಂಬ ಖ್ಯಾತಿ ಧೋನಿಯದ್ದಾಗಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.
Krishnaveni K
Publish Date: Fri, 06 Jul 2018 (10:13 IST)
Updated Date: Fri, 06 Jul 2018 (15:42 IST)