Publish Date: Sun, 08 Jul 2018 (08:34 IST)
Updated Date: Sun, 08 Jul 2018 (08:36 IST)
ನವದೆಹಲಿ: ಸದ್ಯಕ್ಕೆ ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಕ್ರಿಕೆಟಿಗರ ಜತೆ ಅವರ ಕುಟುಂಬದವರೂ ಇದ್ದಾರೆ. ಅವರಲ್ಲಿ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದು ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ.
ಸದ್ಯಕ್ಕೆ ಯಾವುದೇ ಶೂಟಿಂಗ್ ಇಲ್ಲದಿರುವ ಕಾರಣ ಪತಿ ಜತೆ ಕಾಲ ಕಳೆಯಲು ಇಂಗ್ಲೆಂಡ್ ಗೆ ಬಂದಿಳಿದಿರುವ ಅನುಷ್ಕಾ ಇಂಗ್ಲೆಂಡ್ ನ ಬೀದಿಯಲ್ಲಿ ಪತಿ ಜತೆ ಜಾಲಿಯಾಗಿ ವಾಕಿಂಗ್ ಮಾಡುವ ಫೋಟೋಗಳು ವೈರಲ್ ಆಗಿದೆ.
ಇಂತಿಪ್ಪ ಅನುಷ್ಕಾ ಕೇವಲ ಪತಿ ವಿರಾಟ್ ಗೆ ಚಿಯರ್ ಅಪ್ ಮಾಡೋದಲ್ವಂತೆ. ಟೀಂ ಇಂಡಿಯಾದ ಎಲ್ಲಾ ಕ್ರಿಕೆಟಿಗರನ್ನೂ ಹುರಿದುಂಬಿಸುತ್ತಾರಂತೆ. ಅಷ್ಟೇ ಅಲ್ಲದೆ, ಸಮಯ ಸಿಕ್ಕಾಗಲೆಲ್ಲಾ ಎಲ್ಲಾ ಕ್ರಿಕೆಟಿಗರು ಒಂದೇ ಕಡೆ ಸೇರಿ ಜಾಲಿಯಾಗಿರ್ತಾರಂತೆ. ಹಾಗಂತ ಸ್ವತಃ ವಿರಾಟ್ ಹೇಳಿಕೊಂಡಿದ್ದಾರೆ. ಹೇಗಾದ್ರೂ ಸರಿ, ಆವತ್ತು ಆದ ಹಾಗೆ, ಕೊಹ್ಲಿ ಮನಸ್ಸು ಆಟದಿಂದ ಪತ್ನಿ ಕಡೆಗೇ ಹೆಚ್ಚು ವಾಲದಿದ್ದರೆ ಸಾಕು ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.