Publish Date: Tue, 10 Jul 2018 (09:30 IST)
Updated Date: Tue, 10 Jul 2018 (09:31 IST)
ಬ್ರಿಸ್ಟೋಲ್: ಸಚಿನ್ ತೆಂಡುಲ್ಕರ್ ರನ್ನು ಕ್ರಿಕೆಟ್ ದೇವರು ಎಂದೇ ಎಲ್ಲರೂ ಕರೆಯುತ್ತಾರೆ. ಆದರೆ ಇಂಗ್ಲೆಂಡ್ ವಿರುದ್ಧ ಮೂರನೇ ಟಿ20 ಪಂದ್ಯದ ನಂತರ ಅವರನ್ನು ಉತ್ತಮ ಜ್ಯೋತಿಷಿ ಎಂದರೂ ತಪ್ಪಾಗಲಾರದು.
ಮೂರನೇ ಟಿ20 ಪಂದ್ಯದಲ್ಲಿ ಭಾರತ ಗೆಲುವು ಕಾಣಬಹುದು ಎಂದು ಎಲ್ಲರೂ ಲೆಕ್ಕಾಚಾರ ಹಾಕಿರಬಹುದು. ಆದರೆ ಸಚಿನ್ ಭಾರತ ಎಷ್ಟನೇ ಓವರ್ ನಲ್ಲಿ ಗೆಲ್ಲಬಹುದು ಎಂದು ಮೊದಲೇ ಭವಿಷ್ಯ ನುಡಿದಿದ್ದರು. ಅದು ನಿಜವಾಯಿತು!
ಭಾರತ ಬ್ಯಾಟಿಂಗ್ ಆರಂಭಿಸಿದಾಗ ಟ್ವೀಟ್ ಮಾಡಿದ್ದ ಸಚಿನ್ ಟೀಂ ಇಂಡಿಯಾ 19 ನೇ ಓವರ್ ನಲ್ಲಿ ಗೆಲ್ಲಬಹುದು. ನೀವೇನಂತೀರಿ ಎಂದು ಟ್ವಿಟರಿಗರಿಗೆ ಸವಾಲು ಹಾಕಿದ್ದರು. ಇದಕ್ಕೆ ಶೇ. 80 ಮಂದಿ ಸಚಿನ್ ಹೇಳಿಕೆಯನ್ನು ಸಮರ್ಥಿಸಿ ವೊಟ್ ಮಾಡಿದ್ದರು.
ಅದರಂತೆ ಭಾರತ 18.4 ಓವರ್ ನಲ್ಲಿ ಅಂದರೆ 19 ನೇ ಓವರ್ ನಲ್ಲಿ ಗೆಲುವು ಸಾಧಿಸಿತು. ಹೀಗಾಗಿ ಪಂದ್ಯದ ನಂತರ ಟ್ವೀಟ್ ಮಾಡಿದ ಸಚಿನ್ ಅಂತೂ ನನ್ನ ಭವಿಷ್ಯ ನಿಜವಾಯಿತು ಎಂದು ಟೀಂ ಇಂಡಿಯಾ ಹುಡುಗರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.