ಕರಾಚಿ: ಪಾಕಿಸ್ತಾನ ಕ್ರಿಕೆಟಿಗ, ಭಾರತೀಯ ಟೆನಿಸ್ ತಾರೆ ಸಾನಿಯಾ ಮಿರ್ಜಾ ಪತಿ ಶೊಯೇಬ್ ಮಲಿಕ್ ಇದೀಗ ಮೊದಲ ಮಗುವಿನ ಆಗಮನದ ಖುಷಿಯಲ್ಲಿದ್ದಾರೆ. ಅದರ ಜತೆಗೆ ಹೊಸದೊಂದು ನಿರ್ಧಾರಕ್ಕೆ ಬಂದಿದ್ದಾರೆ.
36 ವರ್ಷದ ಪಾಕಿಸ್ತಾನಿ ಕ್ರಿಕೆಟಿಗ 2019 ರ ಬಳಿಕ ಏಕದಿನ ಕ್ರಿಕೆಟ್ ಆಡದೇ ಇರಲು ಶೊಯೇಬ್ ನಿರ್ಧರಿಸಿದ್ದಾರಂತೆ. 2019 ರ ವಿಶ್ವಕಪ್ ಕ್ರಿಕೆಟ್ ತನ್ನ ಪಾಲಿಗೆ ಕೊನೆಯ ಏಕದಿನ ಕ್ರಿಕೆಟ್ ಸರಣಿಯಾಗಲಿದೆ ಎಂದು ಶೊಯೇಬ್ ಘೋಷಿಸಿದ್ದಾರೆ.
ಪಾಕಿಸ್ತಾನ ತಂಡದ ನಾಯಕರಾಗಿಯೂ ಸೇವೆ ಸಲ್ಲಿಸಿದ್ದ ಆಲ್ ರೌಂಡರ್ ಶೊಯೇಬ್ ಇದೀಗ ಹಿರಿಯ ಆಟಗಾರನಾಗಿ ತಂಡದಲ್ಲಿದ್ದಾರೆ. ಮುಂಬರುವ ಟಿ20 ಮತ್ತು ಏಕದಿನ ವಿಶ್ವಕಪ್ ಕ್ರಿಕೆಟ್ ಆಡುವುದು ತನ್ನ ಸದ್ಯದ ಗುರಿ. ಅದಾದ ಬಳಿ ಏಕದಿನ ಕ್ರಿಕೆಟ್ ಗೆ ನಿವೃತ್ತಿ ಹೇಳುವುದಾಗಿ ಶೊಯೇಬ್ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.