Publish Date: Wed, 09 May 2018 (11:15 IST)
Updated Date: Wed, 09 May 2018 (11:17 IST)
ಮೊಹಾಲಿ: ಈ ಐಪಿಎಲ್ ನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುತ್ತಿರುವ ಕನ್ನಡಿಗ, ಕಿಂಗ್ಸ್ ಇಲೆವೆನ್ ಪಂಜಾಬ್ ಆಟಗಾರ ಕೆಎಲ್ ರಾಹುಲ್ ನೂತನವಾಗಿ ಗರಿಷ್ಠ ರನ್ ಗಳಿಸಿದ ಪಟ್ಟಿಯಲ್ಲಿ ಮೊದಲಿಗರಾಗಿದ್ದಾರೆ.
ಈ ಕಾರಣಕ್ಕೆ ಅವರಿಗೆ ಆರೆಂಜ್ ಕ್ಯಾಪ್ ಗೌರವ ಸಿಕ್ಕಿದೆ. ಈ ಮೊದಲು ಇದು ಅಂಬಟಿ ರಾಯುಡು ಜತೆಗಿತ್ತು. ನಿನ್ನೆ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಸೋತರೂ 70 ಬಾಲ್ ಗಳಲ್ಲಿ 95 ರನ್ ಗಳಿಸಿದ ರಾಹುಲ್ ಈ ಗೌರವಕ್ಕೆ ಪಾತ್ರರಾದರು.
ಈ ಐಪಿಎಲ್ ಋತುವಿನ ಒಟ್ಟು 10 ಇನಿಂಗ್ಸ್ ಗಳಿಂದ ರಾಹುಲ್ ಇದುವರೆಗೆ 471 ರನ್ ಗಳಿಸಿ ಮುನ್ನಡೆಯಲ್ಲಿದ್ದಾರೆ. ರಾಯುಡು 423 ರನ್ ಗಳೊಂದಿಗೆ ದ್ವಿತೀಯ ಸ್ಥಾನಕ್ಕೆ ಇಳಿದಿದ್ದಾರೆ. ಬೌಲರ್ ಗಳ ಪೈಕಿ ಆರ್ ಸಿಬಿಯ ಉಮೇಶ್ ಯಾದವ್ 14 ವಿಕೆಟ್ ಗಳೊಂದಿಗೆ ಗರಿಷ್ಠ ವಿಕೆಟ್ ಸಾಧನೆ ಮಾಡಿ ಪರ್ಪಲ್ ಕ್ಯಾಪ್ ಗೌರವಕ್ಕೆ ಪಾತ್ರರಾಗಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.