Publish Date: Wed, 09 May 2018 (08:41 IST)
Updated Date: Wed, 09 May 2018 (08:43 IST)
ಹೈದರಾಬಾದ್: ಸೋಮವಾರ ರಾತ್ರಿ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೈದರಾಬಾದ್ ಸನ್ ರೈಸರ್ಸ್ ವಿರುದ್ಧ ಸೋಲೊಪ್ಪಿತು. ಈ ಸೋಲಿಗೂ ಮೊದಲು ಕೊಹ್ಲಿ ಆಂಡ್ ಟೀಂ ಏನು ಮಾಡಿದ್ದರು ಗೊತ್ತೇ?
ಭಾನುವಾರ ಅಭ್ಯಾಸ ಮುಗಿಸಿ ಕೊಹ್ಲಿ ಸೇರಿದಂತೆ ಆರ್ ಸಿಬಿ ಆಟಗಾರರೆಲ್ಲಾ ತಂಡದ ಸಹವರ್ತಿ ಮೊಹಮ್ಮದ್ ಸಿರಾಜ್ ಮನೆಗೆ ಹೋಗಿ ಭರ್ಜರಿ ಔತಣಕೂಟದಲ್ಲಿ ಪಾಲ್ಗೊಂಡಿತ್ತು.
ಸಿರಾಜ್ ತಮ್ಮ ತಂಡದ ಸಹ ಆಟಗಾರರಿಗೆ ಹೈದರಾಬಾದ್ ಬಿರಿಯಾನಿ ರುಚಿ ತೋರಿಸಿದರು. ಸ್ವತಃ ಸಿರಾಜ್ ಬಾಣಸಿಗನ ಪಾತ್ರವಹಿಸಿದ್ದರು. ಭರ್ಜರಿ ಭೋಜನದ ಬಳಿಕ ಕೊಹ್ಲಿ ಮತ್ತು ಬಳಗ ಸಿರಾಜ್ ಕುಟುಂಬದ ಜತೆಗೆ ಫೋಟೋ ತೆಗೆಸಿಕೊಂಡರು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.