Select Your Language

Notifications

webdunia
webdunia
webdunia
webdunia

ವಿರಾಟ್ ಕೊಹ್ಲಿ ಸ್ಥಾನಕ್ಕೆ ಟೀಂ ಇಂಡಿಯಾಗೆ ಬರಲಿದ್ದಾರೆ ಈ ಹೊಸ ಆಟಗಾರ!

ವಿರಾಟ್ ಕೊಹ್ಲಿ ಸ್ಥಾನಕ್ಕೆ ಟೀಂ ಇಂಡಿಯಾಗೆ ಬರಲಿದ್ದಾರೆ ಈ ಹೊಸ ಆಟಗಾರ!
ಮುಂಬೈ , ಮಂಗಳವಾರ, 8 ಮೇ 2018 (07:37 IST)
ಮುಂಬೈ: ಭಾರತ ಮತ್ತು ಅಫ್ಘಾನಿಸ್ತಾನ ನಡುವೆ ನಡೆಯಲಿರುವ ಏಕಮಾತ್ರ ಟೆಸ್ಟ್ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ಆಡುತ್ತಿಲ್ಲ. ಕೊಹ್ಲಿ ಬದಲಿಗೆ ಬೇರೊಬ್ಬ ಆಟಗಾರನನ್ನು ಬಿಸಿಸಿಐ ಆಯ್ಕೆ ಮಾಡಲಿದೆ.

ಕೊಹ್ಲಿ ಸ್ಥಾನವನ್ನು ತುಂಬಬಲ್ಲ ಆಟಗಾರರು ಸದ್ಯಕ್ಕೆ ಯಾರೂ ಇಲ್ಲ. ಆದರೂ ಬಿಸಿಸಿಐ ಕೊಹ್ಲಿ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾಗೆ ಹೊಸ ಆಟಗಾರರೊಬ್ಬರನ್ನು ಆಯ್ಕೆ ಮಾಡುತ್ತಿದೆ. ಅವರು ಶ್ರೇಯಸ್ ಅಯ್ಯರ್.

ಮುಂಬೈ ಆಟಗಾರ ದೇಶೀಯ ಕ್ರಿಕೆಟ್ ನಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಈಗ ಕೊಹ್ಲಿ ಸ್ಥಾನಕ್ಕೆ ಅವರು ಆಯ್ಕೆಯಾಗಲಿದ್ದಾರೆ. ಮೊದಲೇ ಇಂಗ್ಲೆಂಡ್ ಗೆ ತೆರಳಲಿರುವ ಭಾರತೀಯ ಕ್ರಿಕೆಟಿಗರ ಪೈಕಿ ರವೀಂದ್ರ ಜಡೇಜಾ ಮತ್ತು ಹಾರ್ದಿಕ್ ಪಾಂಡ್ಯ ಮಾತ್ರವೇ ಇರಲಿದ್ದಾರೆ. ಉಳಿದವರೆಲ್ಲರೂ ಅಫ್ಘಾನಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯಕ್ಕೆ ಹಾಜರಿರಲಿದ್ದಾರೆ.

ಹಾರ್ದಿಕ್ ಸ್ಥಾನಕ್ಕೆ ತಮಿಳುನಾಡಿನ ಯುವ ಕ್ರಿಕೆಟಿಗ ವಿಜಯ್ ಶಂಕರ್ ಮತ್ತು  ಜಡೇಜಾ ಸ್ಥಾನಕ್ಕೆ ಅಕ್ಸರ್ ಪಟೇಲ್ ಆಯ್ಕೆಯಾಗಲಿದ್ದಾರೆ ಎಂದು ಆಯ್ಕೆಗಾರರ ಮುಖ್ಯಸ್ಥ ಎಂಎಸ್ ಕೆ ಪ್ರಸಾದ್ ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಹಳೆಯ ಸ್ನೇಹಿತನನ್ನು ಡ್ರೆಸ್ಸಿಂಗ್ ರೂಂ ಸುತ್ತಿಸಿದ ಧೋನಿ!