ಪುಣೆ: ಟೀಂ ಇಂಡಿಯಾ ಪರ ಆಡುವಾಗ ನಾಯಕ ವಿರಾಟ್ ಕೊಹ್ಲಿಗೆ ಧೋನಿಯೇ ಮಾರ್ಗದರ್ಶಕ. ಅದು ಐಪಿಎಲ್ ನಲ್ಲಿ ವಿರೋಧಿ ಟೀಂನಲ್ಲಿದ್ದರೂ ಮುಂದುವರಿದಿದೆ.
ಧೋನಿ ಚೆನ್ನೈ ತಂಡದ ನಾಯಕರಾದರೆ, ಕೊಹ್ಲಿ ಆರ್ ಸಿಬಿ ನಾಯಕ. ನಿನ್ನೆ ಇವರಿಬ್ಬರೂ ಮುಖಾಮುಖಿಯಾಗಿದ್ದರು. ಆದರೂ ಡಿಆರ್ ಎಸ್ ತೆಗೆದುಕೊಳ್ಳುವ ವಿಚಾರದಲ್ಲಿ ಕೊಹ್ಲಿ, ಧೋನಿ ನೀಡಿದ ಸಂಜ್ಞೆಯನ್ನೇ ಪಾಲಿಸಿದರು!
ಆಗಿದ್ದಿಷ್ಟೇ. ಧೋನಿ ಬ್ಯಾಟಿಂಗ್ ಮಾಡುತ್ತಿದ್ದಾಗ ಬೌಲರ್ ಔಟ್ ನೀಡುವಂತೆ ಬಲವಾಗಿ ಅಪೀಲ್ ಮಾಡಿದರು. ಆದರೆ ಧೋನಿ ಕ್ರೀಸ್ ನಿಂದ ಅಲುಗಾಡಲಿಲ್ಲ. ಸಾಮಾನ್ಯವಾಗಿ ತಾವು ಔಟೆಂದು ಗೊತ್ತಾದರೆ ಅಂಪಾಯರ್ ತೀರ್ಪಿಗೂ ಕಾಯದೇ ಧೋನಿ ಪೆವಿಲಿಯನ್ ಕಡೆಗೆ ಹೆಜ್ಜೆ ಹಾಕುತ್ತಾರೆ. ಅದರಲ್ಲೂ ವಿಶೇಷವಾಗಿ ಡಿಆರ್ ಎಸ್ ತೆಗೆದುಕೊಳ್ಳಬೇಕಾದರೆ, ಅಂಪಾಯರ್ ಗಿಂತಲೂ ಚುರುಕಾಗಿ ಬ್ಯಾಟ್ಸ್ ಮನ್ ಔಟ್ ಹೌದೋ ಅಲ್ಲವೋ ಎಂದು ಕರಾರುವಕ್ಕಾಗಿ ನಿರ್ಧರಿಸುತ್ತಾರೆ.
ಹಾಗಾಗಿ ಬೌಲರ್ ಅಪೀಲ್ ಮಾಡಿದರೂ ಧೋನಿ ಕ್ರೀಸ್ ನಲ್ಲೇ ನಿಂತಿರುವುದು ನೋಡಿ ವಿರಾಟ್ ಕೊಹ್ಲಿ ಅದನ್ನೇ ಸೂಚನೆಯೆಂದು ಪರಿಗಣಿಸಿ ಡಿಆರ್ ಎಸ್ ಗೆ ಮನವಿ ಸಲ್ಲಿಸುವ ಗೋಜಿಗೇ ಹೋಗಲಿಲ್ಲ! ಅಷ್ಟು ನಂಬಿಕೆ ತನ್ನ ಮೆಚ್ಚಿನ ಕ್ಯಾಪ್ಟನ್ ಮೇಲೆ ಕೊಹ್ಲಿಗೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.
.