Publish Date: Sat, 05 May 2018 (07:55 IST)
Updated Date: Sat, 05 May 2018 (07:57 IST)
ಮೊಹಾಲಿ: ಈ ಐಪಿಎಲ್ ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಎದುರಾಳಿಯಾದರೆ ಎಲ್ಲರೂ ಕ್ರಿಸ್ ಗೇಲ್ ಮೇಲೆ ಗುರಿಯಿಟ್ಟುಕೊಂಡಿರುತ್ತಾರೆ. ಇದುವೇ ಕೆಎಲ್ ರಾಹುಲ್ ಗೆ ಲಾಭವಾಗಿದೆಯಂತೆ.
ಕಿಂಗ್ಸ್ ಇಲೆವೆನ್ ಪರ ಆಡುವ ಕನ್ನಡಿಗ ರಾಹುಲ್ ಮೊದಲೇ ಆರ್ ಸಿಬಿ ಪರವೂ ಗೇಲ್ ಜತೆ ಆಡಿದ್ದರು. ಹೀಗಾಗಿ ಇಬ್ಬರೂ ಚೆನ್ನಾಗಿ ಜತೆಯಾಟವಾಡುತ್ತಿದ್ದಾರೆ.
ಇದರ ಹಿಂದಿನ ಗುಟ್ಟು ಎಲ್ಲರೂ ಗೇಲ್ ಮೇಲೆ ಒತ್ತಡ ಹೇರುವುದು ಎಂದು ರಾಹುಲ್ ಹೇಳಿಕೊಂಡಿದ್ದಾರೆ. ‘ಎಲ್ಲರೂ ಗೇಲ್ ಮೇಲೆ ದೃಷ್ಟಿ ನೆಟ್ಟಿರುವುದರಿಂದ ನನ್ನ ಮೇಲೆ ಒತ್ತಡ ಕಡಿಮೆಯಾಗುತ್ತದೆ. ಇದರಿಂದ ನನಗೆ ಲಾಭವಾಗುತ್ತದೆ’ ಎಂದು ರಾಹುಲ್ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.