Select Your Language

Notifications

webdunia
webdunia
webdunia
webdunia

ಕ್ರಿಕೆಟ್ ಬಿಟ್ಟು ಮೀನು ಹಿಡಿಯಲು ಹೊರಟ ಕ್ರಿಸ್ ಗೇಲ್

ಕ್ರಿಕೆಟ್ ಬಿಟ್ಟು ಮೀನು ಹಿಡಿಯಲು ಹೊರಟ ಕ್ರಿಸ್ ಗೇಲ್
ಕೊಲ್ಲಂ , ಮಂಗಳವಾರ, 1 ಮೇ 2018 (07:48 IST)
ಕೊಲ್ಲಂ: ಐಪಿಎಲ್ ನಲ್ಲಿ ಸುನಾಮಿ ಎಬ್ಬಿಸಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಆಟಗಾರ ಕ್ರಿಸ್ ಗೇಲ್, ಇದೀಗ ಕೇರಳದಲ್ಲಿ ಮೀನು ಹಿಡಿಯುತ್ತಾ ಕೂಲ್ ಆಗಿದ್ದಾರೆ.

ಸದ್ಯಕ್ಕೆ ವಿಶ್ರಾಂತಿಯಲ್ಲಿರುವ ಗೇಲ್ ಕೇರಳದ ಕೊಲ್ಲಂನ ಹಿನ್ನೀರಿನಲ್ಲಿ ಕುಟುಂಬ ಸಮೇತ ಮಜಾ ಮಾಡುತ್ತಿದ್ದಾರೆ. ಕೇರಳದ ಬೀಚ್ ಸೈಡ್ ನ ರೆಸಾರ್ಟ್ ನಲ್ಲಿ ಸುಂದರ ಕಡಲ ತೀರದಲ್ಲಿ ಪತ್ನಿ, ಮಗಳು ಮತ್ತು ಅತ್ತೆ ಜತೆಗೆ ಜಾಲಿಯಾಗಿ ಸಮಯ ಕಳೆಯುತ್ತಿದ್ದಾರೆ ಗೇಲ್.

ಕೆಲವು ದಿನಗಳವರೆಗೆ ಗೇಲ್ ಇಲ್ಲಿಯೇ ತಂಗಲಿದ್ದಾರೆ ಎಂದು ಹೋಟೆಲ್ ಮೂಲಗಳು ಹೇಳಿವೆ. ಖಾಸಗಿ ಭೇಟಿಯಾಗಿದ್ದರಿಂದ ಹೆಚ್ಚಿನ ಮಾಹಿತಿ ಬಹಿರಂಗಪಡಿಸಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್: ಗೆಲುವಿನ ಮೂಲಕ ಅನುಷ್ಕಾಗೆ ಬರ್ತ್ ಡೇ ಗಿಫ್ಟ್ ಕೊಡುತ್ತಾರಾ ವಿರಾಟ್ ಕೊಹ್ಲಿ?