Publish Date: Mon, 07 May 2018 (08:01 IST)
Updated Date: Mon, 07 May 2018 (08:03 IST)
ಮುಂಬೈ: ವಿರಾಟ್ ಕೊಹ್ಲಿ ಈಗ ವಿಶ್ವವೇ ಕೊಂಡಾಡುವ ಕ್ರಿಕೆಟಿಗನಾಗಿರಬಹುದು. ಆದರೆ ಟೀಂ ಇಂಡಿಯಾಗೆ ಆಯ್ಕೆಯಾದ ಮೊದಲ ದಿನ ಅವರ ಪರಿಸ್ಥಿತಿ ಹೇಗಿತ್ತು ಗೊತ್ತಾ?!
2008 ರ ಕಾಲ. ಅಮ್ಮನ ಜತೆ ಟಿವಿ ನೋಡುವಾಗ ನಾನು ಟೀಂ ಇಂಡಿಯಾಕ್ಕೆ ಸೆಲೆಕ್ಟ್ ಆಗಿದ್ದೆ ಎಂದು ತಿಳಿಯಿತು. ಶ್ರೀಲಂಕಾ ಸರಣಿಗೆ ಆಯ್ಕೆಯಾಗಿದ್ದೇನೆಂದು ನಾನು ನಂಬಿರಲೇ ಇಲ್ಲ. ಕೊನೆಗೆ ಬಿಸಿಸಿಐನಿಂದ ಕರೆ ಬಂದ ಮೇಲೆ ನಂಬಿದೆ. ಆಗಲೂ ರೋಮಾಂಚಿತನಾಗಿದ್ದೆ’ ಎಂದು ಕೊಹ್ಲಿ ಸ್ಮರಿಸಿಕೊಂಡಿದ್ದಾರೆ.
‘ಮೊದಲ ದಿನ ಟೀಂ ಇಂಡಿಯಾಗೆ ಕಾಲಿಟ್ಟಾಗ ತುಂಬಾ ನರ್ವಸ್ ಆಗಿದ್ದೆ. ತಂಡದಲ್ಲಿ ಘಟಾನುಘಟಿ ಆಟಗಾರರಿದ್ದರು. ಮೊದಲ ದಿನವೇ ನನ್ನಲ್ಲಿ ಮಾತನಾಡಲು ಹೇಳಿದರು. ಆದರೆ ಎಲ್ಲಾ ಗ್ರೇಟ್ ಆಟಗಾರರು ನನ್ನನ್ನೇ ದಿಟ್ಟಿಸುವುದು ನೋಡಿ ಮುಜುಗರಕ್ಕೀಡಾಗಿದ್ದೆ. ಈಗಲೂ ನಾವು ಯುವ ಆಟಗಾರರು ತಂಡಕ್ಕೆ ಬಂದಾಗ ಇದೇ ರೀತಿ ಮಾಡಿ ಸ್ವಲ್ಪ ತಮಾಷೆ ನೋಡುತ್ತೇವೆ’ ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.