ಪುಣೆ: ಈ ಐಪಿಎಲ್ ಕೂಟದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಧೋನಿಗೆ ಕಾಲಿಗೆ ಬೀಳುವ ಅಭಿಮಾನಿಗಳ ಕಾಟ ಅತಿಯಾಗಿದೆ.
ಕಳೆದ ಎರಡು ಮೂರು ಪಂದ್ಯಗಳಿಂದ ಧೋನಿಗೆ ಮೈದಾನದಲ್ಲೇ ಬಂದು ಕಾಲಿಗೆ ನಮಸ್ಕರಿಸುವ ಅಭಿಮಾನಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅಂತೂ ಅಭಿಮಾನಿಗಳ ಪಾಲಿಗೆ ಧೋನಿ ದೇವರಾಗಿ ಬಿಟ್ಟಿದ್ದಾರೆ!
ಅಭಿಮಾನದ ಪರಾಕಾಷ್ಠೆ ಎಂದೇ ಇದನ್ನು ಹೇಳಬಹುದು. ಕಳೆದ ಪಂದ್ಯ ಮುಗಿದ ಬಳಿಕವೂ ಅಭಿಮಾನಿಯೊಬ್ಬ ಮೈದಾನಕ್ಕೆ ನುಗ್ಗಿ ನೀವೇ ನಮ್ಮ ದೇವರು ಎಂದು ಧೋನಿ ಕಾಲಿಗೆರಗಿದ್ದರು. ಇದೀಗ ನಿನ್ನೆ ಆರ್ ಸಿಬಿ ವಿರುದ್ಧದ ಪಂದ್ಯದಲ್ಲಿ ಧೋನಿ ಗೆಲುವಿನ ರನ್ ಗಳಿಸಿದ ಬಳಿಕ ಗ್ಲೌಸ್ ಬಿಚ್ಚಿ ಪೆವಿಲಿಯನ್ ಕಡೆಗೆ ಸಾಗಬೇಕೆಂದು ಹೊರಡುವಷ್ಟರಲ್ಲಿ ಅದೆಲ್ಲಿಂದಲೋ ಬಂದ ಅಭಿಮಾನಿ ಗಟ್ಟಿಯಾಗಿ ಕಾಲು ಹಿಡಿದುಕೊಂಡು ಬಿಟ್ಟ! ಧೋನಿಗಂತೂ ಈಗೀಗ ಇದೆಲ್ಲಾ ಅಭ್ಯಾಸವಾಗಿರಬೇಕು. ಹಾಗಾಗಿ ಹೆಚ್ಚು ಗೊಂದಲಕ್ಕೊಳಗಾಗದೇ ಆತನನ್ನು ಹಿಡಿದೆತ್ತಿ ಬೆನ್ನು ತಟ್ಟಿದರು. ಅಂತೂ ಅಭಿಮಾನಿಗಳ ಪಾಲಿಗೆ ಸಚಿನ್ ನಂತರ ಕ್ರಿಕೆಟ್ ನಲ್ಲಿ ಮತ್ತೊಬ್ಬ ದೇವರ ಸೃಷ್ಟಿಯಾಗಿದೆ!
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.