Publish Date: Mon, 07 May 2018 (07:41 IST)
Updated Date: Mon, 07 May 2018 (07:43 IST)
ಕೋಲ್ಕೊತ್ತಾ: ಕೋಲ್ಕೊತ್ತಾ ನೈಟ್ ರೈಡರ್ಸ್ ಪರ ಆಡುವ ಕರ್ನಾಟಕದ ಮಾಜಿ ಆಟಗಾರ ರಾಬಿನ್ ಉತ್ತಪ್ಪ ಐಪಿಎಲ್ ನಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ.
ಐಪಿಎಲ್ ಪಂದ್ಯಾವಳಿ 4000 ರನ್ ಪೂರೈಸಿದ ಆರನೇ ಆಟಗಾರ ಎಂಬ ದಾಖಲೆಗೆ ಉತ್ತಪ್ಪ ಪಾತ್ರರಾಗಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧದ ಕಳೆದ ಪಂದ್ಯದಲ್ಲಿ ಉತ್ತಪ್ಪ ಅರ್ಧಶತಕ ಸಿಡಿಸಿದ್ದರು. ಈ ಸಂದರ್ಭ ಅವರು ವೈಯಕ್ತಿಕ ಮೈಲಿಗಲ್ಲು ಸ್ಥಾಪಿಸಿದ್ದಾರೆ.
ಇದೀಗ ಉತ್ತಪ್ಪ ಒಟ್ಟಾರೆ 4,037 ರನ್ ಗಳಿಸಿದಂತಾಗಿದೆ. 4,801 ರನ್ ಗಳೊಂದಿಗೆ ಸುರೇಶ್ ರೈನಾ ಮೊದಲ ಸ್ಥಾನದಲ್ಲಿದ್ದಾರೆ. ಕೊಹ್ಲಿ 4,775 ದ್ವಿತೀಯ ಸ್ಥಾನದಲ್ಲಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.