Publish Date: Thu, 10 May 2018 (08:22 IST)
Updated Date: Thu, 10 May 2018 (08:24 IST)
ಮುಂಬೈ: ಮೈದಾನದಲ್ಲಿ ಒಮ್ಮೊಮ್ಮೆ ಅಂಪಾಯರ್ ಗಳೂ ಎಡವಟ್ಟು ಮಾಡಿಕೊಳ್ಳುವುದು ಮಾಮೂಲು. ಮುಂಬೈ ಇಂಡಿಯನ್ಸ್ ಮತ್ತು ಕೋಲ್ಕೊತ್ತಾ ನೈಟ್ ರೈಡರ್ಸ್ ನಡುವಿನ ಐಪಿಎಲ್ ಪಂದ್ಯದಲ್ಲೂ ಇಂತಹದ್ದೇ ಘಟನೆ ನಡೆದಿದೆ.
ಆದರೆ ಅಂಪಾಯರ್ ಮಾಡಿದ ಎಡವಟ್ಟಿನಿಂದ ನಷ್ಟವಾಗಿದ್ದು ಕೋಲ್ಕೊತ್ತಾ ತಂಡಕ್ಕೆ. 16 ನೇ ಓವರ್ ನಲ್ಲಿ ಬೌಲರ್ ಟಾಮ್ ಕ್ಯುರೇನ್ ಮಾಡಿದ ಲೀಗಲ್ ಡೆಲಿವರಿಯನ್ನೂ ಅಂಪಾಯರ್ ಅನಂತ ಪದ್ಮನಾಭನ್ ತಪ್ಪಾಗಿ ತಿಳಿದು ನೋ ಬಾಲ್ ಕೊಟ್ಟು ಬಿಟ್ಟರು. ಇದರಿಂದ ಮುಂಬೈ ತಂಡಕ್ಕೆ ಉಚಿತವಾಗಿ ಒಂದು ಫ್ರೀ ಹಿಟ್ ಸಿಕ್ಕಿತು.
ರಿಪ್ಲೇಯಲ್ಲಿ ನೋಡಿದಾಗ ಕೋಲ್ಕೊತ್ತಾ ಆಟಗಾರರಿಗೆ ಎಡವಟ್ಟು ಗೊತ್ತಾಗಿತ್ತು. ತಕ್ಷಣ ನಾಯಕ ದಿನೇಶ್ ಕಾರ್ತಿಕ್ ಮತ್ತು ಸಹ ಆಟಗಾರರು ಅಂಪಾಯರ್ ಗಮನಕ್ಕೆ ತಂದರೂ ಒಮ್ಮೆ ತೀರ್ಪು ಕೊಟ್ಟಾಗಿರುವುದರಿಂದ ಅದನ್ನು ಹಿಂಪಡೆಯಲು ಸಾಧ್ಯವಿಲ್ಲ ಎಂದು ಅಂಪಾಯರ್ ಗಳು ಕೈ ಚೆಲ್ಲಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.