Publish Date: Thu, 10 May 2018 (07:59 IST)
Updated Date: Thu, 10 May 2018 (08:01 IST)
ಮುಂಬೈ: ಸಾಮಾನ್ಯವಾಗಿ ಧೋನಿ ತಮ್ಮ ವೈಯಕ್ತಿಕ ಬದುಕಿನ ಬಗ್ಗೆ ಸಾರ್ವಜನಿಕವಾಗಿ ಹೇಳಿಕೊಳ್ಳುವುದಿಲ್ಲ. ಆದರೆ ಇದೀಗ ಭಾರೀ ಸೀಕ್ರೆಟ್ ಒಂದನ್ನು ಬಿಟ್ಟುಕೊಟ್ಟಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಾಯೋಜಕರ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಸಹ ಆಟಗಾರರೊಂದಿಗೆ ಭಾಗವಹಿಸಿದ ಧೋನಿಗೆ ಸಂದರ್ಶಕರು ನಿಮ್ಮ ಮೊದಲ ಕ್ರಶ್ ಯಾರು ಎಂಬ ಪ್ರಶ್ನೆ ಕೇಳಿದರು.
ಇದಕ್ಕೆ ಧೋನಿ 12 ನೇ ತರಗತಿ ಓದುತ್ತಿದ್ದಾಗ 1999 ರಲ್ಲಿ ಸ್ವಾತಿ ಎನ್ನುವ ಹುಡುಗಿಯ ಮೇಲೆ ತನಗೆ ಮನಸ್ಸಿತ್ತು ಎಂಬ ವಿಚಾರವನ್ನು ಬಾಯ್ಬಿಟ್ಟಿದ್ದಾರೆ. ಆದರೆ ಈ ವಿಷಯವನ್ನು ನನ್ನ ಪತ್ನಿ ಸಾಕ್ಷಿಗೆ ಹೇಳಬೇಡಿ ಎಂದು ತಮಾಷೆಯಾಗಿ ಧೋನಿ ಕೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.