ಸೇಕ್ರೆಡ್ ಗೇಮ್ಸ್ ನಲ್ಲಿ ರಾಜೀವ್ ಗಾಂಧಿಗೆ ಅವಹೇಳನ ; ನಟ ಸಿದ್ದೀಕಿ, ನಿರ್ಮಾಪಕರ ವಿರುದ್ಧ ದೂರು

ಬುಧವಾರ, 11 ಜುಲೈ 2018 (07:04 IST)
ಮುಂಬೈ : ಪಶ್ಚಿಮಬಂಗಾಳದ ಕಾಂಗ್ರೆಸ್ ನಾಯಕ ರಾಜೀವ್ ಕುಮಾರ್ ಸಿನ್ಹಾ ಅವರು ಬಾಲಿವುಡ್ ನಟ ನವಾಝುದ್ದೀನ್ ಸಿದ್ದೀಕಿ, ನೆಟ್‌ಫ್ಲಿಕ್ಸ್ ಹಾಗೂ ವೆಬ್ ಸರಣಿಯ ನಿರ್ಮಾಪಕನ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ.


ವೆಬ್ ಸೀರೀಸ್ ಸೇಕ್ರೆಡ್ ಗೇಮ್ಸ್ ನಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಬಗ್ಗೆ ಅವಹೇಳನ ಮಾಡಲಾಗಿದೆ ಎಂದು ಆರೋಪಿಸಿ ರಾಜೀವ್ ಕುಮಾರ್ ಸಿನ್ಹಾ ಅವರು ನಟ ಹಾಗೂ ನಿರ್ಮಾಪಕನ ವಿರುದ್ಧ ಗಿರೀಶ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ  ದೂರು ದಾಖಲಿಸಿದ್ದಾರೆ.


'ದೂರನ್ನು ಉನ್ನತ ಅಧಿಕಾರಿಗಳಿಗೆ ರವಾನಿಸಲಾಗುವುದು ಹಾಗೂ ಮುಂದಿನ ಮೂರು ದಿನಗಳ ಒಳಗೆ ಪ್ರಥಮ ಮಾಹಿತಿ ವರದಿ ಸಂಖ್ಯೆಯನ್ನು ಕಳುಹಿಸಿಕೊಡಲಾಗುವುದು ಎಂದು ಪೊಲೀಸ್ ಠಾಣೆಯಲ್ಲಿದ್ದ ಅಧಿಕಾರಿಗಳು ತಿಳಿಸಿದ್ದಾರೆ' ಎಂದು ಸಿನ್ಹಾ ಹೇಳಿದ್ದಾರೆ. ಹಾಗೇ ‘ವೆಬ್ ಸರಣಿಯಲ್ಲಿ ಸಿದ್ದೀಖಿ ಅವರು ರಾಜೀವ್ ಗಾಂಧಿ ಅವರನ್ನು ನಿಂದನೀಯ ಪದ ಬಳಸಿ ಉಲ್ಲೇಖಿಸಿದ್ದಾರೆ. ಅಲ್ಲದೆ, ಆ ಕಾಲದ ಕೆಲವು ಸತ್ಯಗಳನ್ನು ತಪ್ಪು ವ್ಯಾಖ್ಯಾನಿಸಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 
 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಡಿವೋರ್ಸ್ ಬಗ್ಗೆ ಪವನ್ ಕಲ್ಯಾಣ್ ಮಾಜಿ ಪತ್ನಿ ಹೇಳಿದ ಸ್ಪೋಟಕ ಮಾಹಿತಿ ಏನು?