Select Your Language

Notifications

webdunia
webdunia
webdunia
webdunia

ಡಿವೋರ್ಸ್ ಬಗ್ಗೆ ಪವನ್ ಕಲ್ಯಾಣ್ ಮಾಜಿ ಪತ್ನಿ ಹೇಳಿದ ಸ್ಪೋಟಕ ಮಾಹಿತಿ ಏನು?

ಹೈದರಾಬಾದ್
ಹೈದರಾಬಾದ್ , ಮಂಗಳವಾರ, 10 ಜುಲೈ 2018 (18:48 IST)
ಹೈದರಾಬಾದ್ : ಇತ್ತೀಚೆಗೆ ಟಾಲಿವುಡ್ ನಟ ಪವನ್ ಕಲ್ಯಾಣ್ ಅವರ ಮಾಜಿ ಪತ್ನಿ ರೇಣು ದೇಸಾಯಿ ಅವರು ನಿಶ್ಚಿತಾರ್ಥ ಮಾಡಿಕೊಂಡಿರುವುದಕ್ಕೆ ಪವನ್ ಅಭಿಮಾನಿಗಳು ಬೆದರಿಕೆ ಒಡ್ಡಿರುವ ಹಿನ್ನಲೆಯಲ್ಲಿ ಇದೀಗ ರೇಣು ದೇಸಾಯಿ ಅವರು ಸಂದರ್ಶನವೊಂದರಲ್ಲಿ ಡಿವೋರ್ಸ್ ಬಗ್ಗೆ ಸ್ಪೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ.


ರೇಣು ದೇಸಾಯಿ ಅವರು 2012ರಂದು ತನ್ನ ಪತಿ ಪವನ್ ಕಲ್ಯಾಣ್ ಅವರಿಂದ ವಿಚ್ಛೇದನ ಪಡೆದುಕೊಂಡಿದ್ದರು. ಸುಮಾರು 6 ವರ್ಷಗಳಾದರೂ ಡಿವೋರ್ಸ್ ಯಾರು ಕೊಟ್ಟಿದ್ದು ಎಂದು ತಿಳಿದಿರಲಿಲ್ಲ. ಆಮೇಲೆ ರೇಣು ದೇಸಾಯಿ ಅವರು  ನಿಶ್ಚಿತಾರ್ಥ ಮಾಡಿಕೊಂಡಿರುವುದಕ್ಕೆ ಪವನ್ ಅಭಿಮಾನಿಗಳು ವಿರೋಧ ವ್ಯಕ್ತಪಡಿಸಿದರು. ಆದಕಾರಣ ಈಗ ಡಿವೋರ್ಸ್ ಯಾರು ನೀಡಿದ್ದು ಎಂಬ ರಹಸ್ಯವನ್ನು ರೇಣು ದೇಸಾಯಿ ಅವರು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.


ಸಂದರ್ಶನದಲ್ಲಿ ಮಾತನಾಡಿದ ಅವರು, “ನಾನು ನಿಜವಾಗಿಯೂ ಡಿವೋರ್ಸ್ ಕೇಳಿಲ್ಲ. ಪವನ್ ಕಲ್ಯಾಣ್ ಅವರೇ ವಿಚ್ಛೇದನ ಕೇಳಿದರು. ಅದು ನನಗೆ, ಪವನ್ ಕಲ್ಯಾಣ್ ಮತ್ತು ಆ ದೇವರಿಗೆ ಗೊತ್ತು. ನಮ್ಮಿಬ್ಬರ ಮಧ್ಯೆ ಪತ್ನಿ-ಪತಿಯ ರೀತಿಯಲ್ಲಿ ಸಾಮಾನ್ಯ ಜಗಳವಾಗಿತ್ತು. ನಾನು ಬೇಡ ಎಂದು ವಾದ ಮಾಡಿದೆ. ಕೋಪ ಮಾಡಿಕೊಂಡೆ. ಆದರೆ ಕೊನೆಯಲ್ಲಿ ಅವರಿಗೆ ವಿಚ್ಛೇದನ ಬೇಕಿತ್ತು, ಆದ್ದರಿಂದ ಡಿವೋರ್ಸ್ ನೀಡಿದೆ” ಎಂದು ರೇಣು ದೇಸಾಯಿ ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸಂಗೀತ ನಿರ್ದೇಶಕ ಸಾಧು ಕೋಕಿಲ ಸಿಸಿಬಿ ಪೊಲೀಸರನ್ನು ಭೇಟಿ ಮಾಡಿದ್ಯಾಕೆ?