ಹೈದರಾಬಾದ್ : ಮಿಲ್ಕಿ ಬ್ಯೂಟಿ ತಮನ್ನಾ ಅವರ ದೇಹ ಸೌಂದರ್ಯ ನೋಡಿದರೆ ತಮಗೂ ಅದೇರೀತಿಯಾದ ಪರ್ಸನಾಲಿಟಿ ಬೇಕು ಎಂದು ಅನಿಸುವುದು ಸಹಜ. ಅದಕ್ಕಾಗಿ ನಟಿ ತಮನ್ನಾ ಅವರು ಇತ್ತೀಚೆಗೆ ತಾವು ಫಿಟ್ ಅಂಡ್ ಪರ್ಫೆಕ್ಟ್ ಪರ್ಸನಾಲಿಟಿ ಹೊಂದಲು ಕಾರಣವೇನು ಎಂಬ ಸಿಕ್ರೇಟ್ ನ್ನು ಬಹಿರಂಗಪಡಿಸಿದ್ದಾರೆ.
ನಟಿ ತಮನ್ನಾ ಅವರು ಬೆಳಿಗ್ಗೆ ಉಗುರು ಬೆಚ್ಚಗಿನ ನೀರು, ನೆನೆಸಿ ಸಿಪ್ಪೆ ತೆಗೆದ ಬಾದಾಮಿಯನ್ನು ಮೊದಲು ಸೇವಿಸುತ್ತಾರಂತೆ. ಇದರ ಜತೆಗೆ ವ್ಯಾಯಾಮಕ್ಕೆ ಒಂದು ಗಂಟೆ ಮೀಸಲಿಡುತ್ತಾರಂತೆ. ಮೊದಲ ಅರ್ಧ ಗಂಟೆ ನಾನಾ ರೀತಿಯ ವರ್ಕ್ ಔಟ್ ಗಳನ್ನು ಮಾಡುತ್ತಾರಂತೆ. ಇನ್ನು ಕೊನೆಯ ಅರ್ಧ ಗಂಟೆ ಮಾತ್ರ ಧ್ಯಾನ, ಯೋಗಾಗೆ ಸಮಯ ಮೀಸಲಿಡುತ್ತಾರಂತೆ. ನಿತ್ಯ ಎರಡು ಮೂರು ಆಸನಗಳನ್ನು ಮಾಡುತ್ತಾರೆ. ಇವೆಲ್ಲವನ್ನೂ ಜಿಮ್ ನಲ್ಲೇ ಮಾಡುತ್ತಾರಂತೆ.
ಇದರಿಂದ ದೇಹದಲ್ಲಿನ ಟಾಕ್ಸಿನ್ಸ್ ಹೊರಬಂದು ಚರ್ಮ ಸುಂದರವಾಗಿ ಹೊಳೆಯುತ್ತದೆಯಂತೆ. ಅದೇ ರೀತಿ ಒತ್ತಡ ಸಹ ದೂರವಾಗುತ್ತದೆಯಂತೆ. ಔಟ್‌ಡೋರ್ ಶೂಟಿಂಗ್ ನಲ್ಲಿದ್ದರೂ ಕಡ್ಡಾಯವಾಗಿ ಸಮಯ ಮೀಸಲಿಡುತ್ತಾರಂತೆ. ಅದಕ್ಕೆ ಸಂಬಂಧಿಸಿದ ನಾನಾ ರೀತಿಯ ಆಪ್ ಗಳನ್ನು ಫಾಲೋ ಮಾಡುತ್ತಾರಂತೆ. ಆಹಾರದ ವಿಚಾರದಲ್ಲೂ ಅಷ್ಟೇ ಎಚ್ಚರ ವಹಿಸುತ್ತಾರಂತೆ. ದೇಹ ಕೂಲಾಗಿರಲು ಮೊಸರನ್ನು ಹೆಚ್ಚಾಗಿ ತಿನ್ನುತ್ತಾರಂತೆ. ನಿತ್ಯ ಹೆಚ್ಚಿನ ಪ್ರಮಾಣದಲ್ಲಿ ನೀರು, ಹಣ್ಣಿನ ರಸಗಳು, ಸೂಪ್ ಗಳು, ಎಳನೀರು ತೆಗೆದುಕೊಳ್ಳಲು ಪ್ರಾಮುಖ್ಯತೆ ನೀಡುತ್ತಾರಂತೆ. ಜಂಕ್ ಫುಡ್, ಸಕ್ಕರೆಯಿಂದ ದೂರ ಇರುತ್ತಾರಂತೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ