ಬಾಲಿವುಡ್ ಈ ನಟನಿಂದ ರಾಣಿ ಮುಖರ್ಜಿ ಹೃದಯವೇ ಒಡೆದು ಹೋಯಿತಂತೆ!

ಬುಧವಾರ, 11 ಜುಲೈ 2018 (11:13 IST)
ಮುಂಬೈ : ಸಂದರ್ಶನವೊಂದರಲ್ಲಿ ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾ ಬಾಲಿವುಡ್ ನ ಸ್ಟಾರ್ ನಟರೊಬ್ಬರಿಂದ ನನ್ನ ಹೃದಯವೇ ಒಡೆದು ಹೋಯಿತು ಎಂದು  ಬಾಲಿವುಡ್ ನಟಿ ರಾಣಿ ಮುಖರ್ಜಿ ಅವರು ಹೇಳಿದ್ದಾರೆ.


ಆ ನಟ ಬೇರೆ ಯಾರು ಅಲ್ಲ. ರಾಣಿ ಮುಖರ್ಜಿ ಅವರ ಜೊತೆ 'ಗುಲಾಮ್' ಸಿನಿಮಾದಲ್ಲಿ ನಟಿಸಿದ ಬಾಲಿವುಡ್ ಮಿಸ್ಟರ್ ಪರ್ಫೆಕ್ಟ್ ಅಮೀರ್ ಖಾನ್. ಇತ್ತೀಚೆಗೆ ಖಾಸಗಿ ಮಾಧ್ಯಮವೊಂದಕ್ಕೆ ವಿಶೇಷ ಸಂದರ್ಶನ ನೀಡಿದ ನಟಿ ರಾಣಿ ಮುಖರ್ಜಿ ಅವರು ಈ ವಿಚಾರವನ್ನು ತಿಳಿಸಿದ್ದಾರೆ.


‘ನಾನು ಚಿಕ್ಕವಳಿದ್ದಾಗಿನಿಂದಲೂ ಅಮೀರ್ ಖಾನ್‍ ರ ದೊಡ್ಡ ಅಭಿಮಾನಿ. ಅಮೀರ್ ಅಭಿನಯದ 'ಖಯಾಮತ್ ಸೇ ಖಯಾಮತ್ ತಕ್' ಚಿತ್ರ ನನ್ನ ಮೆಚ್ಚಿನ ಸಿನಿಮಾ. ಅಮೀರ್ ಖಾನ್ ಮತ್ತು ಜೂಹಿ ಚಾವ್ಲಾ ಜೊತೆಯಾಗಿ 'ಲವ್ ಲವ್ ಲವ್' ಚಿತ್ರದಲ್ಲಿ ನಟಿಸುತ್ತಿದ್ದರು. ಈ ವೇಳೆ ನಾನು ಅಮೀರ್ ಆಟೋಗ್ರಾಫ್ ಪಡೆದುಕೊಳ್ಳಲು ಶೂಟಿಂಗ್ ಸೆಟ್ ಗೆ ಹೋಗಿದ್ದೆ. ಅಲ್ಲಿ ಚಿತ್ರವೊಂದರ ಆಯಕ್ಷನ್ ಸೀನ್ ಶೂಟ್ ನಡೆಯುತ್ತಿತ್ತು. ಜನರ ಗುಂಪಿನ ನಡುವೆ ನಿಂತಿದ್ದ ನಾನು ಆಟೋಗ್ರಾಫ್ ಪಡೆಯಲು ಕಷ್ಟಪಡುತ್ತಿದ್ದೆ. ನನ್ನ ಬುಕ್ ಮೇಲೆ ಡೀಯರ್ ಅಮೀರ್ ಖಾನ್ ಅಂತಾ ಬರೆದಿದ್ದೆ, ಆದ್ರೆ ಇದನ್ನು ಯಾವುದು ಗಮನಿಸದೇ, ಕೈಗೆ ಸಿಕ್ಕ ಬುಕ್‍ ನಲ್ಲಿ ಆಟೋಗ್ರಾಫ್ ಹಾಕಿಕೊಟ್ಟರು. ಈ ವೇಳೆ ನನ್ನನ್ನು ನೋಡದೇ ಅಮೀರ್ ಆಟೋಗ್ರಾಫ್ ಹಾಕಿದ್ದರಿಂದ ಅಂದು ನನ್ನ ಹೃದಯವೇ ಒಡೆದು ಹೋಗಿತ್ತು’ ಎಂದು ಬಾಲ್ಯದ ದಿನಗಳನ್ನು ನೆನಪು ಮಾಡಿಕೊಂಡರು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಟಾಲಿವುಡ್ ನಟ ಪವನ್ ಕಲ್ಯಾಣ ಆತ್ಮಹತ್ಯೆ ಮಾಡಿಕೊಳ್ಳುವೆ ಎಂದು ಹೇಳಿದ್ಯಾಕೆ?